ಕವಿತೆ: ಬೆಳದಿಂಗಳು

– ಮಹೇಶ ಸಿ. ಸಿ.

ಶಶಿಯೂ ತಾನು ಕತ್ತಲಲ್ಲಿ
ಹಾಲು ಬೆಳಕ ಚೆಲ್ಲಿತು
ಬೆಳಕ ಕಂಡು ಕುಶಿಯಲ್ಲಿ
ಮನಕೆ ಹರುಶವಾಯಿತು

ಹುಣ್ಣಿಮೆಯ ಸೊಬಗ ಶಶಿಯು
ಇಳೆಗೆ ತಂಪನೆರೆಯಿತು
ಸುಮ್ಮನಿದ್ದ ಸಾಗರವು
ಕುಣಿಯಲು ಶುರುವಾಯಿತು

ಹಂಸ ತನ್ನ ನಡಿಗೆ ಬಿಟ್ಟು
ಈಜಲು ಹೊರಟಾಯಿತು
ಸಂಜೆ ವೇಳೆಯಲ್ಲೂ
ಸಹ ಕಮಲ ಅರಳಿ ನಿಂತಿತು

ಸುತ್ತ ಇರುವ ಹೂವ ನೋಡಿ
ಕಣ್ಣು ಮನಸಿಗೆನೋ ಹೇಳಿತು
ಕಮಲದೆಲೆಯು ಹಸಿರತೊಟ್ಟು
ಕೆಸರ ನಡುವೆ ತೇಲಿತು

ಎಶ್ಟು ಚೆಂದ ನೋಡು ಚಂದ್ರ
ಪ್ರಕ್ರುತಿಯೆ ನುಡಿಯಿತು
ಕಾಲ ಮುಗಿದು ಸೂರ‍್ಯ ಬರಲು
ಶಶಿಯು ಮೋಡದಲ್ಲಿ ಮರೆಯಾಯಿತು

(ಚಿತ್ರ ಸೆಲೆ: unsplash.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: