ಕವಿತೆ: ಓ ನವಿಲೇ

– ಸವಿತಾ.

ನವಿಲು, Peacock

ನವಿಲೇ ಓ ನವಿಲೇ
ನವಿರಾದ ಬಣ್ಣದಲೀ ಹೊಳೆವೆ
ಬಣ್ಣ ಬಣ್ಣಗಳಲೀ ಕಣ್ಣು ಸೆಳೆವೆ
ನರ‌್ತನದಲೀ ಹೆಸರಾದೆ

ಮಳೆಯ ಕರೆದಂತೆ
ಸಂಜೆಯಾದಂತೆ
ಹೆಣ್ಣು ನವಿಲ ಬಯಸಿದಂತೆ
ಗರಿ ಬಿಚ್ಚಿ ಕುಣಿವೆ

ನವಿಲೇ ಓ ನವಿಲೇ
ಚೆಲುವಿನಾ ಓಕುಳಿಯೇ
ತಲೆಗೊಂದು ಕಿರೀಟ ಬೇರೆ
ಹೊತ್ತು ಮೆರೆತಿಹೆ

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: