ಹರಿವೆಸೊಪ್ಪಿನ ವಡೆ

ಸವಿತಾ.

ಹರಿವೆಸೊಪ್ಪಿನ ವಡೆ, snack, vade

ಬೇಕಾಗುವ ಸಾಮಗ್ರಿಗಳು

ತೊಗರಿಬೇಳೆ – 1/4 ಬಟ್ಟಲು
ಕಡಲೇಬೇಳೆ – 1/4 ಬಟ್ಟಲು
ಉದ್ದಿನಬೇಳೆ – 1/4 ಬಟ್ಟಲು
ಸೋಂಪು ಕಾಳು (ಬಡೆಸೋಪು) – 1 ಚಮಚ
ಓಂ ಕಾಳು (ಅಜಿವಾಯಿನ್) – 1/4 ಚಮಚ
ಇಂಗು – 1/4 ಚಮಚ
ಹಸಿ ಶುಂಟಿ – 1/2 ಇಂಚು
ಜೀರಿಗೆ – 1/2 ಚಮಚ
ಹಸಿಮೆಣಸಿನಕಾಯಿ – 4
ಕತ್ತರಿಸಿದ ಹರಿವೆಸೊಪ್ಪು – 2 ಬಟ್ಟಲು
ಈರುಳ್ಳಿ – 1
ಗರಮ್ ಮಸಾಲೆ ಪುಡಿ – 1/4 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕರಿಬೇವು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಶ್ಟು
ಕರಿಯಲು ಎಣ್ಣೆ

ಮಾಡುವ ಬಗೆ

ತೊಗರಿಬೇಳೆ, ಕಡಲೇಬೇಳೆ, ಉದ್ದಿನಬೇಳೆ, ಸೋಂಪು ಕಾಳು 4 ತಾಸು ನೆನೆಸಿ ಇಟ್ಟುಕೊಳ್ಳಬೇಕು. ನೀರು ಬಸಿದು, ಬೇಳೆ ಮಾತ್ರ ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಿ ತೆಗೆಯಿರಿ. ಅದೇ ಮಿಕ್ಸರ್ ಜಾರ್ ನಲ್ಲಿ, ಇಂಗು, ಜೀರಿಗೆ, ಹಸಿಮೆಣಸಿನಕಾಯಿ, ಹಸಿ ಶುಂಟಿ, ಉಪ್ಪು ಹಾಕಿ ಒಂದು ಸುತ್ತು ತಿರುಗಿಸಿ ಹಿಟ್ಟಿಗೆ ಸೇರಿಸಿ. ಹರಿವೆಸೊಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವು ತೊಳೆದು ಕತ್ತರಿಸಿ ರುಬ್ಬಿದ ಹಿಟ್ಟಿಗೆ ಹಾಕಿ. ಈರುಳ್ಳಿ ಸಣ್ಣಗೆ ಕತ್ತರಿಸಿ ಹಾಕಿ. ಗರಮ್ ಮಸಾಲೆ ಪುಡಿ ಸೇರಿಸಿ. ಉಪ್ಪು ನೋಡಿ ಬೇಕಾದರೆ ಮಾತ್ರ ಸೇರಿಸಿಕೊಂಡು, ಚೆನ್ನಾಗಿ ಕಲಸಿ ವಡೆ ತಟ್ಟಿ ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಈಗ ಹರಿವೆಸೊಪ್ಪಿನ ವಡೆ ಸವಿಯಲು ಸಿದ್ದ. ಕೊಬ್ಬರಿ ಚಟ್ನಿ ಜೊತೆ ಸವಿಯಿರಿ (ಇದು ಹಸಿರೆಲೆ ಹರಿವೆಸೊಪ್ಪಿನಿಂದ ಮಾಡಲಾದ ವಡೆ. ಕೆಂಪು ಎಲೆ ಹರಿವೆಸೊಪ್ಪು ಕೂಡ ಸಿಗುತ್ತದೆ. ಅದರಲ್ಲಿಯೂ ಮಾಡಬಹುದು).

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: