ಕವಿತೆ: ಜೀವದಾತೆ

– ಶ್ಯಾಮಲಶ್ರೀ.ಕೆ.ಎಸ್.ಅಮ್ಮ, Mother

ಜಗದ ಕಶ್ಟವೆಲ್ಲ ಮರೆಸಿದೆ
ಇವಳ ಪ್ರೀತಿಯ ಅಪ್ಪುಗೆ
ಕಂಗಳು ಸುಕ ನಿದ್ರೆಗೆ ಜಾರಿವೆ
ಒರಗಿದಾಗ ಇವಳ ಮಡಿಲಿಗೆ

ದುಕ್ಕವೆಲ್ಲಾ ಮಾಯವಾಗಿದೆ
ಇವಳ ಸ್ಪರ‍್ಶದ ಸಲುಗೆಗೆ
ನೋವು ಕರಗಿ ನಗುವು ಮೂಡಿದೆ
ಇವಳಿತ್ತ ಸ್ಪೂರ‍್ತಿಗೆ

ಕಡಲಿನಾಳಕ್ಕಿಂತ ಆಳವಾಗಿದೆ
ಇವಳ ವಾತ್ಸಲ್ಯದ ಬಾವಸಾಗರ
ಮುಗಿಲೆತ್ತರಕ್ಕೂ ಮಿಗಿಲಾಗಿದೆ
ಇವಳ ಮಮತೆಯ ಹ್ರುದಯದಾಗರ

ಜಗದೊಳು ಸಾಟಿಯಿಲ್ಲವಾಗಿದೆ
ಇವಳ ಪ್ರೇಮದ ಔದಾರ‍್ಯಕೆ
ಜಗವೇ ತಾ ತಲೆಬಾಗಿದೆ
ತಾಯಿಯೆಂಬ ಈ ಜೀವದಾತೆಗೆ

(ಚಿತ್ರ ಸೆಲೆ: pixabay)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications