ಕವಿತೆ: ನಗುತಾ ಇರು

– ಮಹೇಶ ಸಿ. ಸಿ.life, happy, sad, ಬದುಕು, ನಗು. ಅಳು

ನಗುತಾ ಇರು ನೀನು ಬಾಳಲಿ
ಏನೇ ಎದುರಾದರೂ
ಮನದ ಗೂಡಲ್ಲಿ ಎಶ್ಟೇ ಇರಲಿ
ಅಡಗಿರುವ ನೋವುಗಳು

ನಗುವವರು ನಗಲಿ ನೋಡುತ ನಿನ್ನ
ನಗುವಲ್ಲೆ ಸೋಲಿಸು ನೀ ಅವರನ್ನ
ಮೋಸದಿ ಬಲೆಯ ಬೀಸುವ ಮನವ
ಪ್ರೀತಿಯಲ್ಲಿ ಬಿಡಿಸೋಣ

ನಡೆವಾಗ ಎಡವುವುದು ಸಹಜವು ತಾನೆ
ಬಿದ್ದಲ್ಲೆ ಎದ್ದು ನಿಲ್ಲೋಣ
ಮತ್ತೆಂದು ಬೀಳದ ಹಾಗೇ ಎಡವಿ
ಜೋಪಾನವಾಗಿ ನಡೆಯೋಣ

ಕಶ್ಟಗಳೆಂದು ಶಾಶ್ವತವಲ್ಲ
ನಮ್ಮಿಶ್ಟದಂತೆ ಏನೂ ನಡೆಯೋಲ್ಲ
ಎದೆಗೆ ಎದೆ ಕೊಟ್ಟು ನೀನಿಲ್ಲಬೇಕು
ಕಶ್ಟಗಳು ಕೊನೆಯಾಗೋವರೆಗೂ

ಜೀವನವೆಂದು ಆಟವಲ್ಲ
ಬಯಲಲ್ಲಿ ನಡೆಯುವ ನಾಟಕವಲ್ಲ
ಪಾತ್ರದಾರಿಗಳು ನಾವಾಗಿದ್ದರೂ
ಸೂತ್ರದಾರಿ ಅವನಲ್ಲವೇನು

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications