ಹನಿಗವನಗಳು

ಹರೀಶ್ ನಾಯಕ್, ಕಾಸರಗೋಡು.

*** ಸಂಬಂದ ***

ಸಂಬಂದಗಳು
ಒಡೆಯುವುದಕ್ಕೆ
ಗೋಡೆಗಳು ಹೇತುವೆ?
ಅದ ಮುರಿದು
ಕಟ್ಟಬೇಕು
ಸೇತುವೆ

*** ಮತ್ಸರ ***

ಸಂಪತ್ತು ಇದ್ದವರು ದರಿಸಲಿ
ಬಂಗಾರದ ಬಳೆ
ಮುತ್ತಿನಸರ
ಹಾಸಿಗೆ ಇದ್ದಶ್ಟು
ಕಾಲು ಚಾಚೋಣ
ನಮಗೇಕೆ ಮತ್ಸರ

*** ಸೂರ‍್ಯ ***

ಬೆಳಗ್ಗೇನೆ
ಸೂರ್‍ಯ ಹರಡುತ್ತಾನೆ
ತನ್ನ ಹೊಂಬಿಸಿಲು
ಜಗತ್ತಿನ ಜಡತ್ವಕ್ಕೆ
ಮತ್ತೆ ಚೈತನ್ಯ
ತುಂಬಿಸಲು

*** ಸುಳ್ಳು ***

ದೇಹವನ್ನು
ಗಾಸಿಗೊಳಿಸಿದಂತೆ
ಮುಳ್ಳು
ಮನಸ್ಸನ್ನು
ನೋಯಿಸುತ್ತದೆ
ಸುಳ್ಳು

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: