ವಚನಗಳು

– .

ದೇವರು. ಪ್ರಾರ‍್ತನೆ, ಕೋರಿಕೆ, prayer, god

***ಅಯ್ಯ***

ಮರದ ನೆರಳಲ್ಲಿ
ತಂಗಬಹುದಯ್ಯ
ನರನ ನೆರಳಲ್ಲಿ
ತಂಗಬಹುದೇನಯ್ಯ?
ದೂರಾಲೋಚನೆಯ
ಉಳ್ಳವರ ನಂಬಬಹುದಯ್ಯ
ದುರಾಲೋಚನೆಯ
ಉಳ್ಳವರ ನಂಬಬಹುದೇನಯ್ಯ
ಹರಿಹರ ಬ್ರಹ್ಮರಾದಿಗಳು
ಮುನಿದರು ಬದುಕಬಹುದಯ್ಯ
ಶ್ರೀ ತರಳಬಾಳು ಸದ್ಗುರುವು
ಮುನಿದರೆ ಬದುಕಬಹುದೇನಯ್ಯ?

 

***ಶ್ರೀರಕ್ಶೆ***

ಶ್ರೀ ತರಳಬಾಳು ಸದ್ಗುರುವಿನ
ಶ್ರೀರಕ್ಶೆಯು ಜೊತೆಯಿರಲು
ಶ್ರೀ ಸಾಮಾನ್ಯರು ಕೂಡಾ
ಅಸಾಮಾನ್ಯರಾಗಿ ಜಗದೊಳು
ಉರಿಯುವ ಬೆಂಕಿಯೆದುರು
ಮೈಯೊಡ್ಡಿ ನಿಲ್ಲಬಹುದಯ್ಯ
ಹರಿಯುವ ನದಿಯೆದುರು
ಈಜಿ ದಡ ಸೇರಬಹುದಯ್ಯ
ಬಿರುಸಾದ ಗಾಳಿಯೆದರು
ನಾವೆಯ ನಡೆಸಬಹುದಯ್ಯ
ಹರಿಹರ ಬ್ರಹ್ಮಾದಿಗಳೆದುರು
ಬವರವನು ಗೆಲ್ಲಬಹುದಯ್ಯ!

 

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: