ಹನಿಗವನಗಳು

– ವೆಂಕಟೇಶ ಚಾಗಿ.

*** ನೆನಪುಗಳು ***

ಎಲ್ಲರ ನೆನಪುಗಳು
ಈಗ ಮೊಬೈಲ್ ನಲ್ಲಿ
ತಕ್ಶಣ ಉಳಿಯುತಿವೆ
ಮೆಮೊರಿ ಪುಲ್ ಆದಾಗ
ಎಲ್ಲಾ ನೆನಪುಗಳು
ತಕ್ಶಣವೇ ಅಳಿಯುತಿವೆ

*** ಸತ್ಯ ***

ಹೊಗಳಿಕೆ ಎಂಬುದು
ಗಾಳಿ ಇದ್ದಹಾಗೆ
ಎಲ್ಲರೂ ಉಬ್ಬುವರು
ಸತ್ಯ ಎಂಬುದು
ಹೂರಣ ಇದ್ದ ಹಾಗೆ
ಎಲ್ಲರೂ ರುಬ್ಬುವರು

*** ಸಿಕ್ಸರ್ ***

ಬ್ಯಾಟ್ಸ್ ಮನ್ ಗಳೇ
ಬಾರಿಸಬೇಕೆಂದೇನಿಲ್ಲ
ಕ್ರಿಕೆಟ್ ಆಟದಲ್ಲಿ ಸಿಕ್ಸರ್
ಸಿರಾಜ್ ಪಡೆದದ್ದು ಆರು
ಬಾರತ ತಂಡ ಈಗ
ಏಶ್ಯಾ ಕಪ್ ವಿನ್ನರ್

*** ಬಿರುಕು ***

ಇತ್ತೀಚೆಗೆ
ಕಟ್ಟಿದ ಮನೆಮನೆಗಳಲ್ಲೂ
ಬಿರುಕು
ಮನೆಗಳಂತೆ
ಮನೆಯಲ್ಲಿ ಇವರ
ಬದುಕಲ್ಲೂ ಬಿರುಕು

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: