ಸಿಕಿನುಂಡೆ

– ಕಿಶೋರ್ ಕುಮಾರ್.

ಏನೇನು ಬೇಕು

  • ಅಕ್ಕಿ – ½ ಕೆಜಿ
  • ಹುರಿಗಡಲೆ – ½ ಕೆಜಿ
  • ಎಳ್ಳು – ½ ಕೆಜಿ
  • ಬೆಲ್ಲ – 10 ಅಚ್ಚು ಅತವಾ  ½ ಕೆಜಿ
  • ಮೈದಾ ಹಿಟ್ಟು – ½ ಕೆಜಿ
  • ಏಲಕ್ಕಿ – 10
  • ಎಣ್ಣೆ

ಮಾಡುವ ಬಗೆ

ಅಕ್ಕಿಯನ್ನು ಹುರಿದು, ಇದಕ್ಕೆ ಹುರಿಗಡಲೆಯನ್ನು ಸೇರಿಸಿ ನುಣ್ಣಗೆ ಹಿಟ್ಟು ಮಾಡಿಕೊಳ್ಳಬೇಕು (ಮಿಲ್ ನಲ್ಲಿ), ಎಳ್ಳು ಹುರಿದು ಪುಡಿ ಮಾಡಿಕೊಳ್ಳಿ, ಬೆಲ್ಲ ಕರಗಿಸಿ ಪಾಕ ತೆಗೆದಿಡಿ. ಪುಡಿ ಮಾಡಿಕೊಂಡ ಅಕ್ಕಿ, ಹುರಿಗಡಲೆ ಹಾಗೂ ಎಳ್ಳು ಪುಡಿಯನ್ನು ಬೆರೆಸಿ ಇದಕ್ಕೆ ಬೆಲ್ಲದ ಪಾಕ ಸೇರಿಸಿ ಚೆನ್ನಾಗಿ ಕಲಸಿ. ಇದಕ್ಕೆ ಏಲಕ್ಕಿಯನ್ನು ಬಿಡಿಸಿ, ಪುಡಿ ಮಾಡಿಕೊಂಡು ಬೆರೆಸಿ. ಎಲ್ಲವನ್ನೂ ಚೆನ್ನಾಗಿ ಕಲಸಿದ ಮೇಲೆ, ಉಂಡೆ ಕಟ್ಟಿ ಇಟ್ಟುಕೊಳ್ಳಿ. ಮೈದಾ ಹಿಟ್ಟನ್ನು ತೆಳ್ಳಗೆ ಕಲಸಿಕೊಂಡು, ಉಂಡೆಗಳಿಗೆ ಹೊದಿಸಿ ಎಣ್ಣೆಯಲ್ಲಿ ಕರಿಯಿರಿ. ಈಗ ಸಿಹಿಯಾದ ಸಿಕಿನುಂಡೆ ಸವಿಯಲು ರೆಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: