ಕಿರುಗವಿತೆಗಳು

– ನಿತಿನ್ ಗೌಡ.

ನೆನಪಿನಲೆ

ನನ್ನೊಡನೆ ಸೇರಿ ಬೆರೆತೆಲ್ಲಾ ನೆನಪಿನಲೆಯು;
ತೀರ ದಾಟಿ ಹಿಂದೆ ಸರಿದಿದೆ…
ಸರಿದೂ; ಜೊತೆಗೆ ಮನದ ಬಾರ ಕುಸಿದಿದೆ
ಇನ್ನಾದರೂ ಮೂಡಬಹುದೆ ಕಡಲಂಚಲಿ ನೆಮ್ಮದಿಯ ನೇಸರ?

ನಗುವಿನೊಡೆಯ

ಸಾಗು ನೀ ಬಾಳದಾರಿಯಲಿ, ಅಡೆತಡೆಯ ಮೇಲೇರಿ
ಬೀಗು ನೀ ಏಳು ಬೀಳುಗಳ‌ ದಾಟಿ, ದೊರೆಯಂತೆ
ಬೆರೆ ನೀ ಲೋಕದೊಳಗೆ, ಎಲ್ಲರಲ್ಲೊಬ್ಬನಂತೆ,
ಆಗು ನೀ ನಗುವಿನೊಡೆಯ, ನೋವಿನೆಲ್ಲೆ ಮೀರಿ

ಕೈಪಿಡಿ

ನನ್ನ ನಾನು ಕೊನೆಯ ಬಾರಿ ಬೇಟಿಯಾದದ್ದೆಂದು?
ನನ್ನ ನಾನು‌ ಆಲಿಸಿದ ದಿನವಾದರೂ ಅದೆಂದು?
ನನ್ನಂತ ನನಗೆ, ನಾನು ಒತ್ತಾಸೆ ಆದದ್ದೆಂದು!
ನನ್ನೊಳಗಿನ‌ ಹೊತ್ತಿಗೆಯ ಕೈಪಿಡಿ ನಾ ಓದುವುದಾದರು ಎಂದು?

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications