ಕವಿತೆ: ಮುಂದೆ ಸಾಗುವ

– ಕಿಶೋರ್ ಕುಮಾರ್.Life, ಬದುಕು

ಸಮಯ ಜಾರುತಿದೆ
ಜೀವಿಸುವ ಪ್ರತಿ ಕ್ಶಣವ
ನಂಟುಗಳು ದೂರಾಗುತಿವೆ
ಮುನಿಸ ಬದಿಗೊತ್ತಿ ಒಂದಾಗುವ

ಜಟಿಲ ದಾರಿಗಳ ಸವೆಸುವ
ಮುಂದಿನ ದಾರಿಯದು ಸುಗಮ
ಇನ್ನೊಬ್ಬರಿಗೆ ಹೆಗಲಾಗುವ
ಅವರ ಜೀವನವೂ ಆಗಲಿ ಸುಗಮ

ಯಾರಿಗಿಲ್ಲ ನೋವು
ಎದೆಗುಂದದೆ ಮುನ್ನುಗ್ಗುವ
ಮನುಜನಿಗೇನು ಇದು ಹೊಸತೆ
ಏನೇ ಬಂದರೂ ಎದುರಿಸುವ

ಎಲ್ಲವೂ ಇದ್ದೂ ಮರುಗುವುದ ಬಿಡುವ
ಇರುವುದರಲ್ಲೇ ಸಂತಸ ಪಡುವ
ಎಶ್ಟೇ ಇದ್ದರು ಹಂಬಲ ನಿಲ್ಲದು
ಅದಕ್ಕಾಗೆ ಈ ಆಸೆಗಳ ಗೆಲ್ಲುವ

(ಚಿತ್ರ ಸೆಲೆ: fearlessmotivation.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *