ಕವಿತೆ: ಜಾಗ್ರುತರಾಗಿ
– ಶಾರದಾ ಕಾರಂತ್.
ಜಾಗ್ರುತರಾಗಿ
ಇಟ್ಟ ಹೆಜ್ಜೆಯ ಗುರುತು
ಮನದ ನಿಶ್ಚಯದಿಂದ
ಮಾಸುವ ಮೊದಲು ಜಾಗ್ರುತರಾಗಿ
ಗುರಿ ಮುಟ್ಟಲು ನೆಟ್ಟ
ದ್ರುಶ್ಟಿಯು ಕೆಟ್ಟು,
ಕಣ್ಣೆವೆಯಿಕ್ಕುವ ಮೊದಲು ಜಾಗ್ರುತರಾಗಿ
ಹಸನಾದ ಬದುಕಿಗೆ
ಹುಸಿಯು ಪಸರಿಸದಂತೆ
ಮಸುಕುಹಬ್ಬುವ ಮೊದಲು ಜಾಗ್ರುತರಾಗಿ
ಸುಪ್ತ ಮನಸ್ಸಿನ
ಗುಪ್ತ ಬಾವನೆಗಳನ್ನು
ವ್ಯರ‍್ತ ಪ್ರಲಾಪದಿಂದ ತೆರೆದಿಡುವ ಮೊದಲು ಜಾಗ್ರುತರಾಗಿ
ನಟ್ಟ ನಡುವೆ
ದಿಟ್ಟ ನಿರ‍್ಣಯದಿಂದ ಸರಿದು
ಚಲ ಬಿಡುವ ಮೊದಲು ಜಾಗ್ರುತರಾಗಿ
ಕಟ್ಟ ಕಡೆಯ ಹಂಬಲ
ಪೂರೈಸದೆ ನಿಟ್ಟುಸಿರು ಬಿಡುವ ಮೊದಲು ಜಾಗ್ರುತರಾಗಿ
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು