ಕವಿತೆ: ಹೊಸ ಚಿಗುರು

ಶಿಶಿರನು ಅಡಿಯಿಟ್ಟ ಮೇಲೆ
ಬುವಿಯೇಕೋ ಮಂಕಾಗಿದೆ
ಎಲೆಯೆಲ್ಲಾ ಉದುರಿ
ಮರವೆಲ್ಲ ಬರಿದಾಗಿದೆ
ಗಾಳಿಯೇಕೋ ಸುಮ್ಮನೆ
ಅತ್ತಿತ್ತ ತೀಡುತಲಿದೆ
ರಾಶಿ ರಾಶಿ ತರಗೆಲೆಗಳು
ಮಣ್ಣ ಮೇಲೆ ಚೆಲ್ಲಾಪಿಲ್ಲಿಯಾಗಿವೆ
ಬೋಳು ಮರದಲಿ ಕುಳಿತ
ಹಕ್ಕಿಯ ದನಿಯು ಮೂಕಾಗಿದೆ
ಮದುವ ಹೀರಲು ಬಂದ
ದುಂಬಿಗೂ ನಿರಾಶೆ ಮೂಡಿದೆ
ಆಗಸದಿಂದ ಹೊರಬಿದ್ದ
ಕಿರಣಗಳ ತಾಪ ತುಸು ಏರಿದೆ
ಕಾಲಿಯಾದ ಹಸಿರ ಮಡಿಲು
ಹೊಸ ಚಿಗುರಿನ ಬರುವಿಕೆಗೆ ಕಾತರಿಸಿದೆ.
( ಚಿತ್ರ ಸೆಲೆ: kannada.oneindia.com )

ಇತ್ತೀಚಿನ ಅನಿಸಿಕೆಗಳು