Author Archives

 • ಇದುವೆ ನನ್ನ ಕೋರಿಕೆ

  – ಸುರಬಿ ಲತಾ. ಪ್ರೀತಿಯ ಹೆಸರು ಪ್ರೀತಿಯೇ ಗೆಳೆಯ ಮುನಿದಾಕ್ಶಣ ಕರಗಿ ಹೋಗದು ಮುಕ ತಿರುಗಿಸಿ ಕುಳಿತಾಕ್ಶಣ ಬಾಡದು ಅತೀ ಒಲವು ಬಯಸುವುದು ಸಿಗದಾಗ ಸಿಡುಕುವುದು ಸಹಜ ಮನಸು ಬಯಕೆಗಳ ಕಣಜ ಹ್ರುದಯಗಳ ನಡುವೆ ಬಿರುಕು ಬಿಡುವ ಮುನ್ನ ಸರಿಪಡಿಸಿಕೊಳ್ಳದೆ ನಾನೇ ಹೆಚ್ಚು ಎಂಬ ಬಾವ ತರವಲ್ಲ ತಪ್ಪುಗಳು ಒಪ್ಪಿಕೊಂಡಾಕ್ಶಣ ಸಣ್ಣವ ನೀನಾಗಲಾರೆ ಕ್ಶಮಿಸಿದಾಕ್ಶಣ ಪರಿಶುದ್ದ ನಾನಾಗಲಾರೆ… Read More ›

 • ಮನುಜ ಕಾಣ್…

  – ಕೌಸಲ್ಯ. ಪರರ ನೋಯಿಸುವ ತಾನ್ ನೋವಿನ ಪರಿಯನು ಕಾಣ ಪರರ ನಿಂದಿಸುವ ತಾನ್ ಸದಾ ಪರರ ಚಿಂತನೆಯೊಳಿರ‍್ಪನೆಂದರಿಯ ಮನುಜ ಕಾಣ್ ಹುಟ್ಟಿದ ತಾನ್ ಜೀವದನೆಲೆಯೊಳು ಬ್ರಮಿಸಿಕೊಂಡಿರ‍್ಪ ತಾನೆ ಜಗದೊಳು ಮರಣದ ಶಯ್ಯೆಯೊಳಕ್ಕೆ ಪೋಗಲಾರೆ ಇಹುದೆನಗೆ ಶಾಶ್ವತದ ನೆಲಜಲವೆಂಬಂತಿರೆ ಮನುಜ ಕಾಣ್ ಇಹಲೋಕ ಪರಲೋಕ ಪಾತಾಳಲೋಕ ಎಲ್ಲವೂ ನಾಕ ನರಕ ಈ ಬೂಲೋಕ ಬ್ರಮರಬ್ರಮರದ ಸುಳಿಯ ಜಾತಕ… Read More ›

 • ಅಲ್ಲಮನ ವಚನಗಳ ಓದು – 12ನೆಯ ಕಂತು

  – ಸಿ.ಪಿ.ನಾಗರಾಜ. ಏನ ಕಂಡಡೇನಯ್ಯಾ ತನ್ನ ಕಾಣದಾತ ಕುರುಡ ಏನ ಕೇಳಿದಡೇನಯ್ಯಾ ತನ್ನ ಕೇಳದಾತ ಕಿವುಡ ಏನ ಮಾತನಾಡಿದಡೇನಯ್ಯಾ ತನ್ನ ಮಾತಾಡದಾತ ಮೂಕ ದಿಟದಿಂದ ತನ್ನ ತಾ ಕಾಣಬೇಕು ದಿಟದಿಂದ ತನ್ನ ತಾ ಕೇಳಬೇಕು ದಿಟದಿಂದ ತನ್ನ ತಾ ಮಾತಾಡಬೇಕು ಇದೆ ತನ್ನ ನೆಲೆ ಸ್ವಭೂಮಿ ಸ್ವಸ್ವರೂಪು ಕಾಣಾ ಗುಹೇಶ್ವರಾ. ವ್ಯಕ್ತಿಯು ಲೋಕದಲ್ಲಿ ಕಂಡು ಕೇಳಿ ಮಾತನಾಡಿ… Read More ›

 • ಪುಟ್ಟ ಕತೆ:  ಮೊದಲ ಪಾಸ್ ವರ‍್ಡ್

  – ಕೆ.ವಿ.ಶಶಿದರ. ಆತ ಬಹಳ ದೊಡ್ಡ ಕಂಪನಿಯಲ್ಲಿ ಏಳಂಕಿ ಸಂಬಳ ಪಡೆಯುವ ಉನ್ನತ ಅದಿಕಾರಿ. ಇರಲಿಕ್ಕೆ ಐಶಾರಾಮಿ ಮನೆ. ಕೈಗೊಂದು ಕಾಲಿಗೊಂದು ಆಳುಗಳು. ಅವನ, ಅವನ ಕುಟುಂಬದವರ ಉಪಯೋಗಕ್ಕೆ 3-4 ದುಬಾರಿ ವಿದೇಶಿ ಕಾರುಗಳು, ಜೊತೆ ಡ್ರೈವರ್‍ಗಳು. ಅಶ್ಟೇ ಏಕೆ ಅವನ ಎಲ್ಲಾ ಅವಶ್ಯಕತೆಗಳನ್ನು ನೋಡಿಕೊಳ್ಳುತ್ತಿತ್ತು ಕಂಪೆನಿ. ಈ ಅದಿಕಾರಿಯನ್ನು ಕಾಣಲು ಅಲ್ಲಿನ ಉದ್ಯೋಗಿಗಳೇ ದಿನಗಟ್ಟಲೆ ಕಾಯಬೇಕು. ಇಂತಹ… Read More ›

 • ನಿನ್ನ ಜೊತೆಯಾಗುವಾಸೆ ಗೆಳತಿ

  – ಸಂಜಯ್ ದೇವಾಂಗ. (ಅವನು) ನಿನ್ನ ಹ್ರುದಯದ ಕೋಣೆಯಲ್ಲಿ ಪ್ರೀತಿಯಾ ಕೋಳದಿ ಬಂದಿಸಿರುವ ಹ್ರುದಯಗಳ್ಳಿ ನೀನು ನನ್ನ ಹ್ರುದಯವ ಮರಳಿ ಕೊಡು ಎನ್ನುವ ಇನಿಯ ನಾನಲ್ಲ (ಅವಳು) ನಾ ಕಂಡ ಕನಸಿನಂತೆ ಜೊತೆಯಾಗಿ ಪ್ರೀತಿಯ ಅರಮನೆ ಕಟ್ಟುವಾಸೆ ಕ್ಶಮಿಸಿ ಬಿಡು ಗೆಳೆಯ ಹ್ರುದಯದ ಬೀಗವ ನಾ ಕಳೆದು ಕೊಂಡಿರುವೆ. *** ಹೇ ಗೆಳತಿ ನಿನ್ನ ಮೌನ ನನ್ನ… Read More ›

 • ಸಾವಿರದ ಮೌಲ್ಯಗಳು…

  – ಸವಿತಾ. ನೆನಪಿನಾ ನೋವು ಕನಸಿನಾ ಕಡಲು ಬವ್ಯತೆಯ ನಡುವೆಯೂ ಕಂಡ ಸೋಲು ಕಳೆದು ಹೋದ ಸಂಬ್ರಮದ ಸಂಗತಿಗಳು ಸಿಹಿ ನೆನಪಾಗಿ ಮನದಲಿ ಸ್ತಿರ ಆಗಿಹವು. ಅಮೂಲ್ಯ ಸಮಯವ ಅಂತಕರಣದ ಪ್ರೀತಿಯಲಿ ಹಂಚಿದ ನೆನಪು ಮಾತ್ರ ಎದೆಯಲಿ ಉಳಿದಿಹವು. ಕಾಲ ಚಕ್ರದಲಿ ಸಿಲುಕಿ ಮಾನವೀಯತೆ ಮೆರೆದವರು ಹೋದರೂ ಜೀವಂತ ಅವರ ಮೌಲ್ಯಗಳು. (ಚಿತ್ರ ಸೆಲೆ: unsplash.com)

 • ಸಂಪಿಗೆ ಹೂವಿನ ಒಲವಿನ ಕತೆ

  – ಶಾಂತ್ ಸಂಪಿಗೆ. ಸುಂದರವಾದ ಕಾಡಿನ ನಡುವೆ ಸಂಪಿಗೆ ಎನ್ನುವ ಹೂವಿತ್ತು ಸುಗಂದ ಪರಿಮಳ ಹರಡುತ ಎಲ್ಲೆಡೆ ಸುಮದುರ ಕಂಪನು ತುಂಬಿತ್ತು ಮದುವನು ಅರಸಿ ಹೂವನು ಹುಡುಕುತ ಹಾಡುತ ಹೊರಟಿತ್ತು, ದುಂಬಿಗೆ ಚಂದ್ರನ ಚೆಲುವಿತ್ತು ಸಂಪಿಗೆ ಹೂವಿನ ಪರಿಮಳ ಇಂಪಿಗೆ ದುಂಬಿಯು ಸೋತಿತ್ತು, ಹೂವಿನ ಸಂಗವ ಬಯಸಿತ್ತು ಹೂವಿನ ಅಂದಕೆ ಕರಗಿದ ದುಂಬಿಯು ಸನಿಹಕೆ ಬಂದಿತ್ತು, ಒಲವಲಿ… Read More ›

 • ಕಲೀಲ್ ಗಿಬ್ರಾನ್ ನ ಕತೆ: ಕಲೆಯ ಮೌಲ್ಯ

  – ಪ್ರಕಾಶ ಪರ‍್ವತೀಕರ. ರಾಜ ತನ್ನ ಹೆಂಡತಿಗೆ ಕೋಪದಿಂದ ನುಡಿದ, ” ರಾಣಿ, ರಾಣಿಯ ಅಂತಸ್ತಿನ ಹಾಗೆ ನಿನ್ನ ನಡತೆ ಇಲ್ಲವೇ ಇಲ್ಲ. ನನ್ನ ದರ‍್ಮಪತ್ನಿ ಆಗಲು ನೀನು ಕಿಂಚಿತ್ತೂ ಅರ‍್ಹಳಿಲ್ಲ. ನೀನು ವಿವೇಕವಿಲ್ಲದ, ನಿಶ್ಪ್ರಯೋಜಕ ಸ್ತ್ರೀ ಆಗಿರುವೆ” ರಾಣಿ ಸಿಟ್ಟಾಗಿ ನುಡಿದಳು, ” ಪ್ರಪಂಚದಲ್ಲಿ ನಾನೇ ದೊಡ್ಡ ರಾಜ ಎಂಬ ಬ್ರಮೆಯಲ್ಲಿ ನೀವು ಇದ್ದೀರಿ. ಆದರೆ… Read More ›

 • ನಾನು-ಅಪ್ಪ-ಎಂ80 ಬಜಾಜ್

  – ಸಂದೀಪ ಔದಿ. ವಾಹನದ ವೇಗದ ಗತಿ ನಿದಾನಕ್ಕೆ ಬದಲಾಗಿ ಗೇರ್ 3, 2,1 ಮತ್ತೆ ನ್ಯೂಟ್ರಲ್ ಗೆ ತಂದು, ರಸ್ತೆ ಬದಿ ನಿಲ್ಲಿಸಲಾಗಿ, ವಾಹನದ ಹಿಂಬದಿ ಸವಾರನ ಮುಕದಲ್ಲಿ ದೊಡ್ಡ “?” ಪ್ರಶ್ನಾರ‍್ತಕ ಚಿಹ್ನೆ. “ಬಾ ಗಾಡಿ ಹೊಡಿ ಬಾ” – ಮೌನ, ಆಶ್ಚರ‍್ಯ, ತಕ್ಶಣಕ್ಕೆ ಏನೂ ತೋಚದ ಪರಿಸ್ತಿತಿ. ಮೊದಲ ಸಲ ಅಪ್ಪ ‘ನಾನಿನ್ನು… Read More ›

 • ಬದುಕಿಗೆ ದೇವತೆಯಂತೆ

  – ಸವಿತಾ. ಉಕ್ಕುವ ಪ್ರೀತಿ ಸಾಮೀಪ್ಯಕೆ ಹಾತೊರೆಯುವಂತೆ ಒಡನಾಟದಲಿ ಬಾವಗಳು ಬೆಸೆದಂತೆ ಬರವಸೆಯಲಿ ಬೆಳಕೊಂದು ಮೂಡಿದಂತೆ ಸಂಬಂದದಲಿ ಬದ್ರತೆ ಅಚಲವಾದಂತೆ ಮನವ ತಣಿಸುತ ಜತೆಯಿದ್ದು ಪ್ರೇರಕಶಕ್ತಿಯಂತೆ ಸತತ ಓಲೈಸುತ ನಿರಂತರ ಸ್ಪೂರ‍್ತಿವಾಹಿನಿಯಂತೆ ಈ ಹೆಣ್ಣು ಬದುಕಿಗೆ ದೇವತೆಯಂತೆ (ಚಿತ್ರ ಸೆಲೆ: wikimedia.org)