ನಿಮ್ಮ ಬರವಣಿಗೆಯಿಲ್ಲದೆ ‘ಹೊನಲಿ’ಲ್ಲ! ನಿಮ್ಮ ಬರಹಗಳನ್ನು ‘ಹೊನಲಿ’ಗೆ ಕಳುಹಿಸಲು ಹೀಗೆ ಮಾಡಿ:
- ಬರಹಗಳನ್ನು (ಚಿತ್ರಗಳಿದ್ದರೆ ಅವುಗಳೊಡನೆ) ಈ ಮಿಂಚೆಗೆ ಕಳುಹಿಸಿ: . ನಿಮ್ಮ ಮಿಂಚೆ ವಿಳಾಸವನ್ನು ‘ಹೊನಲು’ ತಂಡ ಎಂದಿಗೂ ಬಯಲು ಮಾಡುವುದಿಲ್ಲ.
- ವೀಡಿಯೋ ಮತ್ತು ಆಡಿಯೋಗಳನ್ನು ಯೂಟ್ಯೂಬ್ ಮುಂತಾದ ಮಿನ್ನೆಲೆಗಳಿಗೆ ಏರಿಸಿ ಕೊಂಡಿಯನ್ನು ಮಾತ್ರ ಕಳುಹಿಸಿ.
- ನಿಮ್ಮ ನಿಜವಾದ ಹೆಸರಿನಲ್ಲಿ ಮಾತ್ರ ಬರೆಯಿರಿ.
- ನಿಮ್ಮ ಕೂಡುದಾಣ ಸಂಪರ‍್ಕ ಮಾಹಿತಿ (ಪೇಸ್ಬುಕ್ ಇಲ್ಲವೇ ಟ್ವಿಟರ್ ಕೊಂಡಿ) ಅಂಟಿಸುವುದನ್ನು ಮರೆಯಬೇಡಿ. ಕೂಡುದಾಣಗಳಲ್ಲಿ ನೀವು ಇಲ್ಲದೆ ಹೋದರೆ ಅಂಚೆ ವಿಳಾಸ ಮತ್ತು ನಿಮ್ಮ ಮುಕಚಿತ್ರವೊಂದನ್ನು ಅಂಟಿಸಿ.
ಬರಹಗಾರರು ಗಮನಿಸಬೇಕಾದ ವಿಶಯಗಳು:
- ಎಲ್ಲರಕನ್ನಡದ ಬಳಕೆ: ಬರವಣಿಗೆ ಎಲ್ಲರಕನ್ನಡದಲ್ಲಿರಬೇಕು. ಎಂದರೆ, ಆದಶ್ಟೂ ಹೆಚ್ಚು (ನೂರಕ್ಕೆ ನೂರಲ್ಲ!) ಅಚ್ಚಗನ್ನಡದ ಪದಗಳನ್ನು ಬಳಸಿ ಬರೆಯುವ ಮೊಗಸು ನಿಮ್ಮದಾಗಿರಬೇಕು. ಜೊತೆಗೆ ಹೆಚ್ಚಿನ ಕನ್ನಡಿಗರು ಉಲಿಯದ ಬರಿಗೆಗಳಾದ ಮಹಾಪ್ರಾಣಗಳು, ಋ, ಷ ಇವುಗಳ ಬದಲಾಗಿ ಓರಣವಾಗಿ ಅಲ್ಪಪ್ರಾಣಗಳು, ರು, ಶ ಇವುಗಳನ್ನು ಬಳಸಿರಬೇಕು. ಹಾಗೆಯೇ ಬರಿಗೆಮಣೆಯಲ್ಲಿ ಯಾವ ವಿಶೇಶವಾದ ಕೆಲಸವನ್ನೂ ಅರ‍್ಕಾವೊತ್ತಿನ ರಕಾರಕ್ಕೆ ಒತ್ತು ಬಳಸಿರಬೇಕು. ಎತ್ತುಗೆಗೆ:
ಸುಖ> ಸುಕ,ಕೃಷಿ> ಕ್ರುಶಿ,ಕಷ್ಟ> ಕಶ್ಟ,ಕರ್ನಾಟಕ> ಕರ‍್ನಾಟಕ. ಈ ಕಟ್ಟಳೆಗಳಿಗೆ ಒಳಪಡದ ಬರಹಗಳನ್ನು ಕಳುಹಿಸಿದರೆ ಅವುಗಳನ್ನು ಎಲ್ಲರಕನ್ನಡಕ್ಕೆ ಮಾರ‍್ಪಡಿಸಿ ಹಾಕಬೇಕಾಗಿರುವುದರಿಂದ ಹೊನಲಿನಲ್ಲಿ ಮೂಡಿಬರಲು ತಡವಾಗಬಹುದು. - ವಿಶಯಗಳು: ಬರಹಗಳು ಯಾವ ವಿಶಯದ ಬಗ್ಗೆಯಾದರೂ ಇರಬಹುದು, ಮತ್ತು ಯಾವ ನಿಲುವುಗಳನ್ನು ಬೇಕಾದರೂ ಸಾರಬಹುದು. ‘ಹೊನಲ’ನ್ನು ನಿಮ್ಮ ನಿಲುವುಗಳನ್ನು ಸಾರಲು ಬಳಸಿಕೊಳ್ಳಿ!
- ಹೊಸತನ: ಹಿಂದೆಲ್ಲೂ ಮೂಡಿರದ ಬರಹಗಳಿಗೆ ಮೊದಲಮಣೆ. ಓದುಗರಿಗೆ ಹೊಸತನ ಕೊಡುವ ಉದ್ದೇಶದಿಂದ ಈ ನಿಲುವು.
- ಸರಿತನ: ಬರಹಗಳ ಸರಿ-ತಪ್ಪಿನ ತೀರ‍್ಮಾನ ಬರಹಗಾರರದೇ ಹೊರತು ‘ಹೊನಲು’ ತಂಡದ್ದಲ್ಲ. ಆದುದರಿಂದ ಬರಹಗಳನ್ನು ಕಳುಹಿಸುವ ಮುನ್ನ ಅವುಗಳನ್ನು ಚೆನ್ನಾಗಿ ಸೀಳಿನೋಡಿ, ತಿದ್ದಿ ತೀಡಿ ಕಳುಹಿಸಿ! ಒಮ್ಮೆ ‘ಹೊನಲಿ’ನಲ್ಲಿ ಮೂಡಿದ ಮೇಲೆ ಬರಹಗಳನ್ನು ಮಾರ‍್ಪಡಿಸಲಾಗುವುದಿಲ್ಲ.
- ಹಕ್ಕುಗಳು: ಬರಹಗಾರರ ಹಕ್ಕುಗಳನ್ನು ‘ಹೊನಲು’ ಕಾಪಾಡುತ್ತದೆ. ತಮ್ಮ ಬರಹಗಳಲ್ಲಿ ಇತರರ ಹಕ್ಕುಗಳನ್ನು ಕಾಪಾಡುವ ಹೊಣೆ ಬರಹಗಾರರದೇ ಹೊರತು ‘ಹೊನಲು’ ತಂಡದ್ದಲ್ಲ. ‘ಹೊನಲು’ ತಂಡಕ್ಕೆ ಇವೆರಡು ಹಕ್ಕುಗಳಿರುತ್ತವೆ: (1) ಇಲ್ಲಿ ಮೂಡಿದ ಬರಹಗಳನ್ನು ಹೊತ್ತಗೆಯ ಮತ್ತು ಮಿನ್ನೊತ್ತಗೆಯ (e-book) ರೂಪದಲ್ಲಿ ಹೊರತರುವ ಹಕ್ಕು ಮತ್ತು (2) ಬರಹಗಾರರ ಹೆಸರು, ಚಿತ್ರ ಹಾಗೂ ಪೇಸ್ಬುಕ್/ಟ್ವಿಟರ್ ಕೊಂಡಿಗಳೊಡನೆ ಬರಹಗಳನ್ನು ಮಿಂಬಲೆಯಲ್ಲಿ ಮತ್ತು ಮಿಂಬಲೆಯಾಚೆ ಬಯಲರಿಕೆ ಮಾಡುವ ಹಕ್ಕು.
ಇತ್ತೀಚಿನ ಅನಿಸಿಕೆಗಳು