ಕಟ್ಟಡಕ್ಕಿಂತ ಅದರ ’ಏಣಿ’ ಕಟ್ಟುವುದೇ ಕಶ್ಟ!

– ರಗುನಂದನ್

mile_high

ಪ್ರಪಂಚದಲ್ಲಿ ಈಗಿರುವ ಕಡು-ಎತ್ತರವಾದ ಕಟ್ಟಡಗಳು ಇವು,

  1. ಬುರ‍್ಜ್ ಕಾಲಿಪಾ ದುಬಯ್ – 828 ಮೀಟರ್‍
  2. ಮೆಕ್ಕಾ ರಾಯಲ್ ಕ್ಲಾಕ್ ಟವರ್‍ – 610 ಮೀಟರ್‍
  3. ತೇಯ್ಪಯ್ 101 – 508 ಮೀಟರ್‍
  4. ಮಾನ್ಹಟ್ಟನ್ ಟ್ವಿನ್ ಟವರ‍್ಸ್ – 415 ಮೀಟರ್‍

ನಿಮಗೆ ಸೋಜಿಗವೆನಿಸಬಹುದು – ಒಂದು ಎತ್ತರವಾದ ಕಟ್ಟಡವನ್ನು ಕಟ್ಟಲು ತುಂಬಾ ಸುಲಬ ಆದರೆ ಅದಕ್ಕೆ ಏರಿಳಿಯ (elevator/lift) ಏರ‍್ಪಾಟು  ಉಂಟುಮಾಡುವುದು ಕಶ್ಟ.ಇದಕ್ಕೆ ಕಾರಣಗಳು,

  1. ಕಟ್ಟಡ ಮೇಲೆ ಮೇಲೆ ಹೋದಶ್ಟು ಉದ್ದುದ್ದವಾದ ಉಕ್ಕಿನ ಸರಪಳಿಗಳು(steel cables) ಬೇಕಾಗುತ್ತವೆ. (ನೆನಪಿರಲಿ – ಉಕ್ಕಿನ ತೂಕ ಹೆಚ್ಚು)
  2. ಬಿರಟೆ ಏರ‍್ಪಾಟು (braking system) ಗಟ್ಟಿಮುಟ್ಟಾಗಿರಬೇಕಾಗುತ್ತದೆ.

1854ರಲ್ಲಿ ಒಂದು ಸಂತೆಯಲ್ಲಿ ಮೊದಲ ಸಲಿ ಏರಿಳಿಯನ್ನು (elevator/lift) ಬಳಕೆ ತೋರಿಸಿದವನ ಹೆಸರು ಓಟಿಸ್. ಅವನ ಬಿಣಿಗೆಯ(machine) ಬಿರಟೆ ಏರ‍್ಪಾಟನ್ನು ನೋಡಿದ ಮಂದಿ ಅದು ಗಟ್ಟಿ ಇದೆ ಎಂದು ತೀರ‍್ಮಾನಿಸಿದರು. ಅದರ ಬಳಿಕ ಕಟ್ಟಡಗಳು ಎತ್ತರವಾಗುತ್ತಾ ಹೋದವು.

ಇತ್ತೀಚಿನ ಬೆಳವಣಿಗೆ ಏನೆಂದರೆ ಸಾವಿರ ಮೀಟರ್‍ ಉದ್ದವುಳ್ಳ ’ಏರಿಳಿ’ (lift/elevator) ತಯಾರಿಸುವುದು. ಇದನ್ನು ಕೋನೆ ಎಂಬ ಪಿನ್ಲಾಂಡಿನ ಕಂಪನಿಯೊಂದು ತಯಾರುಮಾಡಿದೆ. ಇವರು ಉಕ್ಕು ಕಂಬಿಗಳನ್ನು ಬಳಸುತ್ತಿಲ್ಲ ಬದಲಾಗಿ ತೂಕ ಕಡಿಮೆ ಮಾಡಲು ಕರ‍್ಪು ನಾರುಗಳನ್ನು (carbon fibers) ಬಳಸಿ ’ಏರಿಳಿ’ ಏರ‍್ಪಾಟನ್ನು ಮಾಡುತ್ತಿದ್ದಾರೆ.

ಉಕ್ಕಿನ ಸರಪಳಿಗಳು ಅಶ್ಟೊಂದು ತೂಕ ಇರುತ್ತವೆಯೇ ?

ಹವ್ದು. ಈಗಿನ ಏರಿಳಿಗಳಿಗೆ (lift) ಬಳಸುವ ಉಕ್ಕಿನ ಸರಪಳಿಗಳು ಕಡಿಮೆ ಅಂದರೂ 27000 ಕೆ.ಜಿ ತೂಕ ಹೊಂದಿರುತ್ತವೆ. ಇದರೊಟ್ಟಿಗೆ ಎತ್ತರವಾದ ಕಟ್ಟಡಗಳು ಗಾಳಿಗೆ ಕೊಂಚ ಮಟ್ಟಿಗೆ ತೂಗುತ್ತವೆಯಾದ್ದರಿಂದ (swaying) ಅದರ ಹೊರೆಯನ್ನು ಸರಪಳಿಗಳು ತಡೆಯಬೇಕಾಗುತ್ತದೆ. ಇದಕ್ಕೆ ಕೋನೆಯವರ ಬಗೆಹರಿಕೆ (solution) ’ಅಲ್ಟ್ರಾರೋಪ್’ ಎಂಬ ಹೊಸ ಸರಪಳಿಗಳು.

ಇವು ಕರ‍್ಪಿನ ನಾರುಗಳಿಂದ ಮಾಡಿದ ಕಾರಣ ಹಗುರವಾಗಿರುತ್ತವೆ ಮತ್ತು ಬಲವಾಗಿಯೂ ಇರುತ್ತವೆ. ಕೋನೆ ಕಂಪನಿಯವರ ಪ್ರಕಾರ ಈ  ನಾರುಗಳು 100ಕ್ಕೆ 45ರಶ್ಟು ತೂಕ ಕಡಿಮೆ ಮಾಡುತ್ತವೆಯಂತೆ. ಈ ಹೊಸ ಸರಪಳಿಗಳಿಂದ ಇನ್ನೂ ಎರಡು ಒಳಿತುಗಳಿವೆ.

  1.  ಕರ‍್ಪಿನ ನಾರುಗಳಿಂದ ಮಾಡಿದ ಸರಪಳಿಗಳಿಗೆ ಬಿರಟೆ ಏರ‍್ಪಾಟು ಸುಲಬ.
  2.  ಕರ‍್ಪಿನ ನಾರುಗಳಿಂದ ಮಾಡಿದ ಏರಿಳಿಗಳ ತೂಗುವಿಕೆಯೂ (swaying) ಕಡಿಮೆ.

ಸವ್ದಿ ಅರೇಬಿಯಾದಲ್ಲಿ ಕಿಂಗ್‌ಡಮ್ ಟವರ್‍ ಎಂಬ ಕಟ್ಟಡದ ಕೆಲಸ ಆರಂಬವಾಗಿದೆ. ಇದರ ಎತ್ತರ ಇನ್ನೂ ಬಯಲು ಮಾಡಿಲ್ಲವಾದರೂ, ಇದು ಕಡಿಮೆ ಅಂದರೂ ಒಂದು ಕಿಲೋಮೀಟರ್‍ ಇರುವ ಸಾದ್ಯತೆ ಇದೆ !

ಹೀಗಿರುವಾಗ ಕೋನೆ ಕಂಪನಿಯವರ ಸರಪಳಿಯ ಈ ಹೊಸ ಹೊಳಹು ಎತ್ತರದ ಕಟ್ಟಡಗಳ ಉಸಿರಾಗಲಿದೆ ಎಂದು ಕಟ್ಟಡದರಿಗರು ಅರಿತುಕೊಂಡಿದ್ದಾರೆ.

ತಿಳಿವಿನ ಸೆಲೆ:  http://www.wfs.org/http://www.economist.com/

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications