ನಾಗರ ಪಂಚಮಿಗೆ ಮಾಡಿ ನೋಡಿ ಅಳ್ಳು(ಅರಳು)

– ರೂಪಾ ಪಾಟೀಲ್.

ಇನ್ನೇನು ನಾಗರ ಪಂಚಮಿ ಬಂದೇ ಬಿಟ್ಟಿತು. ನಾಗರ ಪಂಚಮಿಗೆ ಅರಳು ಹುರಿಯೋದು ಬಹುಕಾಲದಿಂದಲೂ ನಡೆದುಕೊಂಡು ಬಂದ ರೂಡಿ. ಆದರೆ ಇತ್ತೀಚಿನ ಪಿಜ್ಜಾ-ಬರ‍್ಗರ್ ಯುಗದಲ್ಲಿ ಇದು ಕಣ್ಮರೆಯಾಗುತ್ತಿದೆ. ರೂಡಿ – ಸಂಪ್ರದಾಯಕ್ಕೆ ಹೆಸರುವಾಸಿಯಾದ ನಮ್ಮ ನಾಡಿನ ಪಂಚಮಿಯ ವಿಶೇಶ ಅರಳು ಹುರಿಯುವುದು ಹೇಗೆ ಎಂದು ತಿಳಿಯೋಣ ಬನ್ನಿ.

ಅರಳು ಮಾಡಲು ಬೇಕಾಗುವ ಸಾಮಗ್ರಿಗಳು

  • ಬಿಳಿ ಜೋಳ ಇಲ್ಲವೇ ಅರಳಿನ ಜೋಳ

ಮಾಡುವ ಬಗೆ

ಅರಳಿನ ಜೋಳ ಅತವಾ ಸಾಮಾನ್ಯವಾಗಿ ಸಿಗುವ ಬಿಳಿ ಜೋಳವನ್ನು ಬಿಸಿಯಾಗಿರುವ ನೀರಿನಲ್ಲಿ ಹಾಕಿ 10-15 ನಿಮಿಶಗಳ ಕಾಲ ಕುದಿಸಿ. ಒಲೆಯಿಂದ ಕೆಳಗಿಳಿಸಿದ ಬಳಿಕ ನೀರು ಬಸಿದು, 8-10 ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ.

ದೊಡ್ಡ ಅಳತೆಯ ದಪ್ಪ ತಳದ ಬುಟ್ಟಿಯನ್ನು ಒಲೆಯ ಮೇಲಿಟ್ಟು ಚೆನ್ನಾಗಿ ಕಾಯಿಸಿ. ಅದಕ್ಕೆ ಈ ಮೊದಲು ತಯಾರಿಸಿಕೊಂಡ ಜೋಳವನ್ನು ಸ್ವಲ್ಪ-ಸ್ವಲ್ಪ ತೆಗೆದುಕೊಂಡು ಬುಟ್ಟಿಗೆ ಹಾಕಿ ಮೇಲೆ ಬಟ್ಟೆಯನ್ನು ಹಾಕಿ ಮುಚ್ಚಿ. ಉರಿ ಸಣ್ಣಗೆ ಇಟ್ಟುಕೊಂಡು, ಬಟ್ಟೆಯ ಮೇಲ್ಗಡೆಯಿಂದ ಹಗುರವಾಗಿ ಕೈಯಾಡಿಸುವುದು. ಚಟ್-ಪಟ್ ಅನ್ನೋ ಶಬ್ದ ಮಾಡುತ್ತಾ ಅರಳು ತಯಾರಾಗುತ್ತವೆ. ತಿನ್ನಲು ಕುರುಕಲು ತಿಂಡಿಯ ಹಾಗೆ ಬಳಸಬಹುದು. ಇದನ್ನು ಮಕ್ಕಳು ತುಂಬಾ ಮೆಚ್ಚಿಕೊಳ್ಳುತ್ತಾರೆ.

(ಚಿತ್ರ ಸೆಲೆ: ರೂಪಾ ಪಾಟೀಲ್)Categories: ನಡೆ-ನುಡಿ

ಟ್ಯಾಗ್ ಗಳು:, , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s