ಕಿರುಕತೆ: ರಕ್ಶಕ

– .

ಸಾಕ್ಶಿ ಬೆಕ್ಕು ಕಂಡರೆ ಮಾರುದ್ದ ಓಡುತ್ತಿದ್ದಳು. ಅಕ್ಕಪಕ್ಕದ ಮನೆಯ ಬೆಕ್ಕು ಇವಳ ಮನೆಗೆ ಲಗ್ಗೆ ಇಟ್ಟಾಗ ಮನಸಾರೆ ಶಪಿಸುತಿದ್ದಳು. ಅಲ್ಲದೇ, ಉದ್ದನೆಯ ಕೋಲು ತೆಗೆದುಕೊಂಡು ಹೆದರಿಸಿ ಓಡಿಸುತಿದ್ದಳು. ಅಂದು ಮದ್ಯಾಹ್ನ ಎರಡು ಗಂಟೆ ಇರಬಹುದು ಕಾಂಪೌಂಡಿನ ಸಂದಿಯಿಂದ ಮಿಡಿ ನಾಗರ ಹಾವು ಅಂಗಳಕ್ಕೆ ಬಂದಿತ್ತು, ಆಗ ಅಲ್ಲೆ ಮನೆಯ ಕೈತೋಟದಲ್ಲಿ ಕೆಲಸ ಮಾಡುತಿದ್ದ ಸಾಕ್ಶಿ ಅಚಾನಕ್ ತಿರುಗಿ ನೋಡಿದರೆ ಮಿಡಿ ನಾಗರ ಒಂದೆರಡು ಅಡಿ ಅಂತರದಲ್ಲಿ ಹೆಡೆಯೆತ್ತಿ ನಿಂತಿದೆ. ಸಾಕ್ಶಿಯ ಜಂಗಾಬಲವೇ ಉಡುಗಿ ತರತರ ನಡುಗುತ್ತಿರುವಾಗ ಎಲ್ಲಿಂದಲೋ ಚಂಗನೆ ಹಾರಿ ಬಂದ ಕರಿ ಬೆಕ್ಕೊಂದು ಮಿಡಿನಾಗರದ ಜೊತೆಗೆ ಸೆಣೆಸಾಡಿ ಮನೆಯ ಹೊರಗೆ ಓಡಿಸಿತು. ಹೋದ ಜೀವ ಮರಳಿ ಬಂದಂತಾದ ಸಾಕ್ಶಿಗೆ ಬೆಕ್ಕೆಂದರೆ ಅಸಹ್ಯ ಪಟ್ಟುಕೊಳ್ಳತಿದ್ದವಳಿಗೆ ಅದರ ಮೇಲೆ ಕ್ರುತಜ್ನತಾ ಬಾವ ಮೂಡಿತು. ಪೋನಿನಲ್ಲಿ ಅಮ್ಮನಿಗೆ ಕತೆ ಮಾಡಿ ಹೇಳಿದಳು! ಅಮ್ಮ ಮಾರನೆಯ ದಿವಸ ಮಗಳನ್ನು ನೋಡಲು ಮನೆಗೆ ಬಂದಳು ಮತ್ತು ಬರುವಾಗ ಒಂದು ಬಾಸ್ಕೆಟಿನಲ್ಲಿ ಮಗಳಿಗೆ ಉಡುಗೊರೆ ತಂದಿದ್ದಳು. ಸಾಕ್ಶಿ ಬಾಸ್ಕೆಟ್ ಮುಚ್ಚಳ ತೆಗೆದು ನೋಡಿದರೆ ಮುದ್ದಾದ ಬಿಳಿ ಬೆಕ್ಕಿನ ಮರಿ, ಅಮ್ಮ ಅದನ್ನು ಉಡುಗೊರೆಯಾಗಿ ತಂದಿದ್ದಳು!

( ಚಿತ್ರಸೆಲೆ: microsoft.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *