ಕವಿತೆ: ಸಂಕ್ರಾತಿ ಬಂದೈತೆ

– ಶ್ಯಾಮಲಶ್ರೀ.ಕೆ.ಎಸ್.

ಸಂಕ್ರಾಂತಿ, Sankranti

ಸಂಕ್ರಾಂತಿ ಬಂದೈತೆ
ಜನಪದ ಸೊಗಡನು ಹರಡೈತೆ
ಎಲ್ಲೆಲ್ಲೂ ಸೊಬಗು ಸುಗ್ಗಿಯ ಹಿಗ್ಗು
ಬೂಮಿಗೆ ತಂದೈತೆ ಸಗ್ಗ

ತೋರಣ ಕಟ್ಟಿ ಚಿತ್ತಾರ ಬಿಡಿಸಿ
ಬೆಲ್ಲವ ಕುಟ್ಟಿ ಎಳ್ಳನ್ನು ಬೆರೆಸಿ
ನಗುನಗುತಾ ಬಾಳಿ
ಎಂದೈತೆ ಹಬ್ಬ

ಹೂಗಳ ಸಿಂಗರಿಸಿ
ಬೂತಾಯಿಗೆ ನಮಿಸಿ
ರಾಸುಗಳ ಕಿಚ್ಚಾಯಿಸಿ
ಎಲ್ಲರ ನೋವ ದೂಡೈತೆ ಹಬ್ಬ

ಹೊಸ ವರುಶಕೆ
ಹೊಸ ಹರುಶವ ನೀಡೈತೆ
ಹೊಸತನವ ಸಾರೈತೆ ಹಬ್ಬ

(ಚಿತ್ರ ಸೆಲೆ: apk-cloud.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *