ಕವಿತೆ: ಹರ ಹರ ಶಂಕರ
– ಸವಿತಾ.

ಹರ ಹರ ಶಂಕರ
ಅಬಯಂಕರ
ನಟರಾಜ ನಮೋ ನಮಹ
ನೀ ದಯಾನಿದಿ
ನಾ ಪಾಮರ ಜೀವಿ
ಸಾಕಿ ಸಲುಹಿ
ನೀಡೆನಗೆ ಸುಕ ಶಾಂತಿ
ಪುಣ್ಯ ಪಾಪದ ಹೊಳೆಯಲಿ
ಪಾಪವ ಕೊಂದವ ನೀ
ಬಲವಾಗಿ ಬಂದು
ಶರಣಂಗೆ ಒಲಿದವ ನೀ
ಬ್ರಹ್ಮಾಂಡದ ಒಡೆಯ
ನಿರಾಬರಣ ಸಚ್ಚಿದಾನಂದ
ನಿರಾಕಾರ ಓಂಕಾರ ನೀಲಕಂಟ
ಗಿರಿಜಾ ಶಂಕರ ನಮೋ ನಮಹ
ಜಯ ಜಯ ಶಂಕರ
ಜಯ ಜಯ ಮಹಾದೇವ
ನಮೋ ನಮಹ
(ಚಿತ್ರಸೆಲೆ: pixabay.com )

ಇತ್ತೀಚಿನ ಅನಿಸಿಕೆಗಳು