ಅರಿಮೆ

ತಿಳಿಯೋಣು ಬಾರಾ!

ಇರುವೆಗಳ ಕಾಲೋನಿ ಬಗ್ಗೆ ನಿಮಗೆ ಗೊತ್ತೇ?

– ನಾಗರಾಜ್ ಬದ್ರಾ. ಮನುಶ್ಯನು ಹೇಗೆ ಒಂದು ಕುಟುಂಬ ಹಾಗೂ ಕೂಡಣವನ್ನು ಕಟ್ಟಿಕೊಂಡು ಒಗ್ಗಟ್ಟಿನಿಂದ ಬದುಕುತ್ತಿರುವನೋ, ಹಾಗೆಯೇ ಇರುವೆಗಳು ಕೂಡ ತಮ್ಮದೇ ಆದ ಒಂದು ಚಿಕ್ಕ ಕೂಡಣವನ್ನು ಕಟ್ಟಿಕೊಂಡು ಒಗ್ಗಟ್ಟಿನಿಂದ ಬದುಕುತ್ತವೆ. ಇರುವೆಗಳು ಸುಮಾರು 50 ಮಿಲಿಯನ್ ವರ‍್ಶಗಳಿಂದ ಒಳ್ಳೆಯ ಏರ‍್ಪಾಟಿನ ಕಾಲೋನಿಗಳನ್ನು ಕಟ್ಟಿಕೊಂಡು ಒಗ್ಗಟ್ಟಿನಿಂದ ಬದುಕುತ್ತಿವೆ! ಇರುವೆಗಳು ನೆಲದ ಒಳಗೆ, ಗಿಡದ ಎಲೆಯ ಕಸದಲ್ಲಿ, ಕೊಳೆಯುತ್ತಿರುವ… Read More ›

ನಾಡು ಕಂಡ ಹೆಮ್ಮೆಯ ಬಾನರಿಗ ಪ್ರೊ.ಯು.ಆರ್.ರಾವ್

– ಜಯತೀರ‍್ತ ನಾಡಗವ್ಡ. ಬಾರತದ ಬಾನರಿಮೆಯ ಹೆಸರುವಾಸಿ ಅರಿಮೆಗಾರ ಪ್ರೊಪೆಸರ್ ಯು.ಆರ್. ರಾವ್ ಕಳೆದವಾರ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಉಡುಪಿ ರಾಮಚಂದ್ರ ರಾವ್ ಇವರ ಪೂರ‍್ಣ ಹೆಸರು. 10ನೇ ಮಾರ‍್ಚ್ 1932ರಂದು ಉಡುಪಿ ಜಿಲ್ಲೆಯ ಅದಮಾರು ಎಂಬ ಹಳ್ಳಿಯಲ್ಲಿ ಪ್ರೊ.ರಾವ್ ಹುಟ್ಟಿದರು. ಶ್ರೀ ಲಕ್ಶ್ಮೀನಾರಾಯಣ ಆಚಾರ‍್ಯ ಇವರ ತಂದೆ ಮತ್ತು ಕ್ರಿಶ್ಣವೇಣಿ ಇವರ ತಾಯಿ. ತಮ್ಮ ಮೊದಲ… Read More ›

ಬೆಕ್ಕುಗಳ ಕುರಿತು ಕೆಲವು ಅಪರೂಪದ ಸಂಗತಿಗಳು

– ನಾಗರಾಜ್ ಬದ್ರಾ. ಸಾಮಾನ್ಯವಾಗಿ ಮನುಶ್ಯರಲ್ಲಿ ಬೇರೊಬ್ಬರೊಂದಿಗೆ ಹೋಲಿಕೆ ಆಗದ ಗುರುತು ಎಂದರೆ ಬೆರಳಚ್ಚು. ಪ್ರತಿಯೊಬ್ಬರ ಬೆರಳಚ್ಚು ಕೂಡ ಬೇರೆ ಬೇರೆ ಆಗಿದ್ದು, ಇನ್ನೊಬ್ಬರ ಬೆರಳಚ್ಚಿಗೆ ಹೊಂದಾಣಿಕೆ ಆಗುವ ಯಾವುದೇ ಪ್ರಕರಣ ಇಂದಿನವರೆಗೆ ಬೆಳಕಿಗೆ ಬಂದಿಲ್ಲ. ಈ ಅಪರೂಪದ ಸಂಗತಿಯನ್ನು ಅರಿಮೆಗಾರರು ಹಲವಾರು ವರ‍್ಶಗಳ ಹಿಂದೆಯೇ ಕಂಡುಹಿಡಿದ್ದಾರೆ. ಹಾಗೆಯೇ ಸಾಕುಪ್ರಾಣಿ ಬೆಕ್ಕು ಕೂಡ ಇದೇ ರೀತಿಯ ಒಂದು… Read More ›

ಆಕಳಿಕೆ – ಹಲವು ರೋಚಕ ಸತ್ಯಗಳು

– ಕೆ.ವಿ.ಶಶಿದರ. ಆಕಳಿಸದಿರುವವರೇ ಹುಟ್ಟಿಲ್ಲ ಎನ್ನುವಶ್ಟರ ಮಟ್ಟಿಗೆ ಆಕಳಿಕೆ ಸಾರ‍್ವತ್ರಿಕ. ಬೆನ್ನೆಲುಬು ಇರದ ಪ್ರಾಣಿಗಳು ಹಾಗೂ ಸಸ್ತನಿಗಳು ಆಕಳಿಸುತ್ತವೆ ಎಂಬುದು ನಿತ್ಯಸತ್ಯ. ದನಕರುಗಳು, ಬೆಕ್ಕು ನಾಯಿ ಮಂಗಗಳು, ಹುಲಿ, ಚಿರತೆ, ಸಿಂಹಗಳು, ಒಂಟೆ ಜಿರಾಪೆಗಳು, ಕತ್ತೆ-ಕುದುರೆಗಳು ಮುಂತಾದ ಎಲ್ಲವೂ ಆಕಳಿಕೆಯ ದಾಸರೆ.  ಸಾಮಾನ್ಯ ತಿಳುವಳಿಕೆಯಂತೆ, ಮಾಡುತ್ತಿರುವ ಕೆಲಸದಲ್ಲಿ ಬೇಸರವಾದರೆ ಅತವಾ ಅದರಲ್ಲಿ ಆಸಕ್ತಿ ಕಡಿಮೆಯಾದರೆ ಆಕಳಿಕೆ ತಾನೇ… Read More ›

ನಿಮ್ಮ ಮನೆಯ ಹಿತ್ತಲಲ್ಲೇ ಕಾಡನ್ನು ಬೆಳೆಯಿರಿ!

– ಕೊಡೇರಿ ಬಾರದ್ವಾಜ ಕಾರಂತ. ನಿಮ್ಮ ಮನೆಯ ಹಿತ್ತಲಲ್ಲೆ ಕಾಡನ್ನು ಬೆಳೆಸಬಹುದು! ಮನೆಯ ಹಿತ್ತಲಲ್ಲಿ ಕೈದೋಟವನ್ನು ಬೆಳೆಸುವುದನ್ನು ಕೇಳಿರುತ್ತೀರಿ, ಇದೇನಿದು ‘ಕಾಡು’ ಎಂದು ನಿಮಗೆ ಬೆರಗಾಗಬಹುದು. ಹೌದು, ಕಾಡು ಎಂದಾಗ ನಮಗೆ ದೊಡ್ಡ ಜಾಗದಲ್ಲಿ ಬಹಳ ಮರಗಳಿದ್ದು, ಕಾಡುಮಿಕಗಳು ಓಡಾಡಿಕೊಂಡಿರುವುದು ತೋಚುತ್ತದೆ. ಆದರೆ ಕಾಡನ್ನು ಒಂದು ಸಣ್ಣ ಜಾಗದಲ್ಲಿಯೂ ಬೆಳೆಯಬಹುದು. ಮರಗಳನ್ನು ಮನುಶ್ಯ ಒಳನುಗ್ಗಲಾರದಶ್ಟು ಹತ್ತಿರತ್ತಿರದಲ್ಲಿ… Read More ›

ಚಿಟ್ಟೆಗಳಲ್ಲೊಂದು ಅಪರೂಪದ ಸಂಗತಿ

– ನಾಗರಾಜ್ ಬದ್ರಾ. ಸಾಮಾನ್ಯವಾಗಿ ಮನುಶ್ಯನಂತೆ ಎಲ್ಲಾ ಪ್ರಾಣಿ ಹಾಗೂ ಹಕ್ಕಿಗಳಲ್ಲಿಯು ಕೂಡ ಗಂಡು, ಹೆಣ್ಣು ಎಂಬ ಎರಡು ಲೈಂಗಿಕ (Sexual) ವರ‍್ಗಗಳಿದ್ದು, ಈ ಎರಡರ ಲೈಂಗಿಕ ಗುಣಲಕ್ಶಣಗಳು ಬೇರೆ ಬೇರೆ ಆಗಿರುತ್ತವೆ. ಯಾವುದೇ ಜೀವಿಯು ಸಾಮಾನ್ಯವಾಗಿ ಗಂಡು ಅತವಾ ಹೆಣ್ಣು ಯಾವುದಾದರೂ ಒಂದರ ಲೈಂಗಿಕ ಗುಣಲಕ್ಶಣಗಳನ್ನು ಹೊಂದಿರುತ್ತವೆ. ಮನುಶ್ಯರಲ್ಲಿ ಕೆಲವರು ಗಂಡು, ಹೆಣ್ಣು ಎರಡೂ ಗುಣಲಕ್ಶಣಗಳನ್ನು… Read More ›

ಮೊಬೈಲ್ ತೊಳೆಯಲೊಂದು ಸೋಪು!

– ರತೀಶ ರತ್ನಾಕರ. ಒಂದು ಬಚ್ಚಲುಮನೆಯ ಕಮೋಡ್‍ನಲ್ಲಿರುವ ಬ್ಯಾಕ್ಟೀರಿಯಾಗಳಿಗಿಂತ 20 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳು ನಿಮ್ಮ ಚೂಟಿಯುಲಿಯ (smartphone) ತೆರೆ ಮೇಲೆ ಇವೆ! ನಂಬುವುದಕ್ಕೆ ಆಗುವುದಿಲ್ಲ ಆದರೂ ಇದು ದಿಟ. ದಿನಬಳಕೆಯ ಚೂಟಿಯುಲಿಯನ್ನು ಮೆದುವಾದ ಬಟ್ಟೆಯಿಂದ ಒರೆಸಿ ಚೊಕ್ಕಗೊಳಿಸುವ ಗೋಜಿಗೆ ಹೆಚ್ಚಿನವರು ಹೋಗುವುದಿಲ್ಲ. ಮೆಲ್ನೋಟಕ್ಕೆ ತೆರೆಯು ಚೊಕ್ಕವಾಗಿದ್ದಂತೆ ಕಂಡರೂ, ದೂಳು, ಅಂಗೈ ಬೆವರು ಹಾಗೂ ಕೊಳಕು ತಾಗಿ,… Read More ›

ಅಳಿಲುಗಳ ಬಗ್ಗೆ ಗೊತ್ತಿರಬೇಕಾದ ಕೆಲವು ಸಂಗತಿಗಳು

– ನಾಗರಾಜ್ ಬದ್ರಾ. ಅಳಿಲುಗಳು ಮನೆ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬರುವ ಸಾಮಾನ್ಯ ಹಾಲೂಡಿ (mammal), ಹಾಗಾಗಿ ಇವುಗಳನ್ನು ನೋಡಿಲ್ಲ ಎನ್ನುವವರಿಲ್ಲ. ಹಾಲೂಡಿ ವರ‍್ಗದ ಪ್ರಾಣಿಗಳಲ್ಲೇ ಅತ್ಯಂತ ಚೂಟಿಯಾದ ಪ್ರಾಣಿಗಳಿವು. ಸಾಮಾನ್ಯವಾಗಿ ಇವು ಗಿಡಮರಗಳಲ್ಲಿ ನೆಲೆಸುತ್ತವೆ. ಹುಲ್ಲು ಹಾಗೂ ತುಂಬಾ ಚಿಕ್ಕ ಕಟ್ಟಿಗೆಗಳನ್ನು ಬಳಸಿ ಗಿಡಮರಗಳ ಎತ್ತರದ ತುದಿಗಳಲ್ಲಿ ತಮ್ಮ ಗೂಡನ್ನು ಕಟ್ಟಿ ಬದುಕು ನಡೆಸುತ್ತವೆ. ಒಣಬೀಜ ಹಾಗೂ… Read More ›

ನಿಮ್ಮ ಮೆದುಳಿನ ಬಗ್ಗೆ ನಿಮಗೆಶ್ಟು ಗೊತ್ತು?

– ಕೆ.ವಿ.ಶಶಿದರ. ಪ್ರಾಣಿಗಳೆಲ್ಲೆಲ್ಲಾ ಮಾನವ ಅತಿ ಬುದ್ದಿವಂತ ಪ್ರಾಣಿ. ಪ್ರಾಣಿಯಿಂದ ಮನುಶ್ಯನನ್ನು ಬೇರ‍್ಪಡಿಸುವುದು ಅವನಲ್ಲಿ ಹುದುಗಿರುವ ಆಲೋಚನಾ ಶಕ್ತಿ. ಆಲೋಚಿಸುವ ಹಾಗೂ ತಿಳುವಳಿಕೆಯುಳ್ಳ ಪ್ರಾಣಿಯಾದ್ದರಿಂದ ಮಾನವ ಬೇರೆಲ್ಲಾ ಪ್ರಾಣಿಗಳಿಗಿಂತ ತೀರ ಬಿನ್ನ. ಇದಕ್ಕೆಲ್ಲಾ ಮೂಲ ಮೆದುಳು. ಮೆದುಳಿನಲ್ಲಿ 100 ಬಿಲಿಯನ್‍ಗೂ ಹೆಚ್ಚು ನರಕೋಶಗಳಿವೆ. ಸಾಮಾನ್ಯ ಮೆದುಳು ದಿನವೊಂದಕ್ಕೆ 70,000ಕ್ಕೂ ಮಿಗಿಲಾದ ಆಲೋಚನೆಗಳಿಗೆ ಹುಟ್ಟನ್ನು ನೀಡುತ್ತದೆ! ಲಕ್ಶಾಂತರ ನೆನಪುಗಳ… Read More ›

‘ನೊಣ’ವೆಂಬ ಕೀಟದ ಮೇಲೊಂದು ಕಿರುನೋಟ

– ನಾಗರಾಜ್ ಬದ್ರಾ. ಸಂಪತ್ ತುಂಬಾ ಚೂಟಿಯಾದ ಹುಡುಗ. 10 ನೇ ತರಗತಿಯಲ್ಲಿ ಓದುತ್ತಿರುವ ಇವನಿಗೆ ತನ್ನ ಸುತ್ತಮುತ್ತಲಿನ ವಿಶಯಗಳಲ್ಲಿ ಕುತೂಹಲ ಹೆಚ್ಚು. ಅವನ ಕುತೂಹಲ ಎಶ್ಟರಮಟ್ಟಿಗೆ ಇತ್ತೆಂದರೆ ಒಂದು ದಿನ ಟಿ.ವಿಯಲ್ಲಿ ಚಿತ್ರಗಳು ಹೇಗೆ ಬರುತ್ತವೆ, ಅದರ ಒಳಗಡೆ ಏನಿದೆ ಎಂದು ನೋಡುವ ಕುತೂಹಲದಲ್ಲಿ ಮನೆಯಲ್ಲಿನ ಇಡೀ ಟಿ.ವಿಯನ್ನೇ ಬಿಚ್ಚಿಟ್ಟಿದ್ದನು. ಬಳಿಕ ಅವನ ತಂದೆ ಆ… Read More ›