ಮಯ್ಯರಿಮೆ

ನಿಮ್ಮ ಮೆದುಳಿನ ಬಗ್ಗೆ ನಿಮಗೆಶ್ಟು ಗೊತ್ತು?

– ಕೆ.ವಿ.ಶಶಿದರ. ಪ್ರಾಣಿಗಳೆಲ್ಲೆಲ್ಲಾ ಮಾನವ ಅತಿ ಬುದ್ದಿವಂತ ಪ್ರಾಣಿ. ಪ್ರಾಣಿಯಿಂದ ಮನುಶ್ಯನನ್ನು ಬೇರ‍್ಪಡಿಸುವುದು ಅವನಲ್ಲಿ ಹುದುಗಿರುವ ಆಲೋಚನಾ ಶಕ್ತಿ. ಆಲೋಚಿಸುವ ಹಾಗೂ ತಿಳುವಳಿಕೆಯುಳ್ಳ ಪ್ರಾಣಿಯಾದ್ದರಿಂದ ಮಾನವ ಬೇರೆಲ್ಲಾ ಪ್ರಾಣಿಗಳಿಗಿಂತ ತೀರ ಬಿನ್ನ. ಇದಕ್ಕೆಲ್ಲಾ ಮೂಲ ಮೆದುಳು. ಮೆದುಳಿನಲ್ಲಿ 100 ಬಿಲಿಯನ್‍ಗೂ ಹೆಚ್ಚು ನರಕೋಶಗಳಿವೆ. ಸಾಮಾನ್ಯ ಮೆದುಳು ದಿನವೊಂದಕ್ಕೆ 70,000ಕ್ಕೂ ಮಿಗಿಲಾದ ಆಲೋಚನೆಗಳಿಗೆ ಹುಟ್ಟನ್ನು ನೀಡುತ್ತದೆ! ಲಕ್ಶಾಂತರ ನೆನಪುಗಳ… Read More ›

ಮೊಡವೆಗಳಿಗೆ ಮದ್ದು

– ಯಶವನ್ತ ಬಾಣಸವಾಡಿ. ಮೊಡವೆಯ ಕಡುಹಿಗೆ (intensity) ತಕ್ಕಂತೆ ಕೂರನಿಸಿಕೆ (emotional distress) ಹಾಗು ಕಲೆಜಡ್ಡುಗಳು (scars) ಉಂಟಾಗಬಹುದು. ಮೊಡವೆಗಳು ಕಾಣಿಸಿಕೊಂಡ ಕೂಡಲೇ ತಕ್ಕ ಆರಯ್ಕೆಗಳನ್ನು ಮಾಡಿದರೆ, ಮನಸ್ಸಿಗೆ ಹಾಗು ತೊಗಲಿಗೆ ಆಗುವ ತೊಂದರೆಗಳನ್ನು ತಗ್ಗಿಸಬಹುದಾಗಿದೆ. ಮೊಡವೆಗಳ ಮಾಂಜುಗೆಯಲ್ಲಿ ಬಳಕೆಯಾಗುವ ಮದ್ದುಗಳು ಮಯ್-ಜಿಡ್ಡನ್ನು (sebum) ಕಡಿಮೆ ಮಾಡುವ, ಒಚ್ಚಿರುಗಳ (bacteria) ಸೋಂಕನ್ನು ತಡೆಯುವ ಇಲ್ಲವೇ ಉರಿಯೂತವನ್ನು… Read More ›

ಮೊಡವೆಗಳು

– ಯಶವನ್ತ ಬಾಣಸವಾಡಿ. ಮಯ್-ಜಿಡ್ಡು (sebum) ಹಾಗು ಸತ್ತ ತೊಗಲಿನ ಗೂಡುಗಳು, ಕೂದಲಿನ ಚೀಲಗಳಲ್ಲಿ (hair follicles) ಕಟ್ಟಿಕೊಳ್ಳುವುದರಿಂದ ಮೊಡವೆಗಳು ಉಂಟಾಗುತ್ತವೆ. ಮೊಡವೆಗಳನ್ನು ಹುಟ್ಟಿಸುವ ಇರುಹುಗಳು (factors): 1) ಮಯ್-ಜಿಡ್ಡು 2) ಸತ್ತ ತೊಗಲಿನ ಗೂಡುಗಳು 3) ಕಟ್ಟಿಕೊಂಡ ಕೂದಲಿನ ಚೀಲದ ತೂತು 4) ಒಚ್ಚೀರುಗಳು (bacteria) ಮೋರೆ, ಕುತ್ತಿಗೆ, ಬೆನ್ನು, ಎದೆ ಹಾಗು ಹೆಗಲುಗಳ… Read More ›

ಮಯ್ಯರಿಮೆಯ ಕನ್ನಡ ಪದಪಟ್ಟಿ

– ಯಶವನ್ತ ಬಾಣಸವಾಡಿ. ಮತ್ತೊಂದು ನವೆಂಬರ್ ತಿಂಗಳು ಬಂದಿದೆ. ಜಗತ್ತಿನೆಲ್ಲೆಡೆಯ ಕನ್ನಡಿಗರ ಮನವು ತನ್ನತನದ ಅರಿವಿನೆಡೆಗೆ (ಇಲ್ಲವೇ ಅದರ ಕೊರತೆಯೆಡೆಗೆ) ಮತ್ತೊಮ್ಮೆ ತುಡಿಯುತ್ತಿದೆ. ಇದರ ನಡುವೆ ಕನ್ನಡಿಗರ ನಾಳೆಗಳನ್ನು ಕಟ್ಟಲು ಬೇಕಾದ ನುಡಿ ಹಮ್ಮುಗೆಯ (Language Planning) ಅಗತ್ಯತೆ ಇನ್ನಶ್ಟು ಎದ್ದು ಕಾಣುತ್ತಿದೆ. ಅರಿಮೆಯ ಎಲ್ಲ ಸಾರವನ್ನು ಕನ್ನಡಿಸುವ ಕೆಲಸ ಇಂದು ಆಗಲೇಬೇಕಿದ್ದು, ಇದರಲ್ಲಿ ಪದಕಟ್ಟಣೆಯ… Read More ›

ಚಿಕೂನ್ ಗುನ್ಯಾ

– ಯಶವನ್ತ ಬಾಣಸವಾಡಿ. ಚಿಕೂನ್ ಗುನ್ಯಾ (chikungunya) ಎಂಬ ನಂಜುಳಗಳು (viruses) ಮನುಶ್ಯರಲ್ಲಿ ಚಿಕೂನ್ ಗುನ್ಯಾ ಬೇನೆಯನ್ನು ಉಂಟುಮಾಡುತ್ತವೆ. ಸೊಳ್ಳೆಗಳಿಂದ ಹರಡುವ ಈ ಬೇನೆಯನ್ನು ಮೊದಲ ಬಾರಿಗೆ ಬಡಗಣ ಟಾಂಜಾನಿಯಾದಲ್ಲಿ (North Tanzania) 1952 ರ ಹೊತ್ತಿಗೆ ಗುರುತಿಸಲಾಯಿತು. “ಚಿಕೂನ್ ಗುನ್ಯಾ” ಹೆಸರು, ಕಿಮಕೊಂಡೆ (Kimakonde) ನುಡಿಯಿಂದ ಬಂದಿದೆ. ಕಿಮಕೊಂಡೆ ನುಡಿಯಲ್ಲಿ ಚಿಕೂನ್ ಗುನ್ಯಾ ಪದವು… Read More ›

ತೊಗಲಿನ ಕೆಲಸವೇನು?

– ಯಶವನ್ತ ಬಾಣಸವಾಡಿ. ತೊಗಲೇರ‍್ಪಾಟು ಬಾಗ – 3: ಹಿಂದಿನ ಎರಡು ಕಂತುಗಳಲ್ಲಿ ತೊಗಲೇರ‍್ಪಾಟಿನ ಒಡಲರಿಮೆಯನ್ನು ತಿಳಿಸಿಕೊಟ್ಟಿದ್ದೇನೆ. ತೊಗಲೇರ‍್ಪಾಟಿನ ಈ ಕೊನೆಯ ಕಂತಿನಲ್ಲಿ ತೊಗಲಿನ ಕೆಲಸದ ಬಗ್ಗೆ (ಉಸಿರಿಯರಿಮೆ = physiology) ತಿಳಿದುಕೊಳ್ಳೋಣ. ತೊಗಲಿನ ಅರಿದಾದ (important) ಕೆಲಸಗಳು ಕೆಳಕಂಡಂತಿವೆ. ಕೊಂಪರೆಸುವಿಕೆ (keratinization): ಕೊಂಪರೆ ಮುನ್ನು (keratin protein), ದನಕರುಗಳ ಕೊಂಬುಗಳ ಪದರಗಳಲ್ಲಿ ಹೆಚ್ಚಾಗಿ ಕಂಡು… Read More ›

ತೊಗಲೇರ‍್ಪಾಟು ಬಾಗ-2

– ಯಶವನ್ತ ಬಾಣಸವಾಡಿ. ತೊಗಲೇರ‍್ಪಾಟಿನ ಹಿಂದಿನ ಕಂತಿನಲ್ಲಿ, ತೊಗಲಿನ ಒಡಲರಿಮೆಯ ಬಗ್ಗೆ ತಿಳಿಸಿಕೊಟ್ಟಿದ್ದೆ. ಈ ಕಂತಿನಲ್ಲಿ ತೊಗಲಿಗೆ ಹೊಂದಿಕೊಂಡಿರುವ ನೆರವಿನ (accessory) ಬಾಗಗಳ ಒಡಲರಿಮೆಯನ್ನು ಅರಿಯೋಣ. ತೊಗಲಿನ ನೆರವಿನ ಬಾಗಗಳು: 1) ಕೂದಲುಗಳು 2) ಉಗುರುಗಳು 3) ಬೆವರು ಸುರಿಕಗಳು (sweat glands) 4) ಮಯ್-ಜಿಡ್ಡಿನ ಸುರಿಕಗಳು (sebaceous glands) 5) ಗುಗ್ಗೆ ಸುರಿಕಗಳು (ceruminous… Read More ›

ನಮ್ಮ ಮಯ್ಯಿ ತೊಗಲು

– ಯಶವನ್ತ ಬಾಣಸವಾಡಿ. ನಮ್ಮ ಮಯ್ಯಲ್ಲಿರುವ ಏರ‍್ಪಾಟುಗಳ ಬಗ್ಗೆ ನನ್ನ  ಹಿಂದಿನ ಬರಹಗಳಲ್ಲಿ ತಿಳಿಸುತ್ತಾ ಬಂದಿರುವೆ. ಈ ಸರಣಿ ಬರಹವನ್ನು ಮುಂದುವರೆಸುತ್ತಾ, ಮುಂದಿನ ಮೂರು ಕಂತುಗಳಲ್ಲಿ ತೊಗಲೇರ‍್ಪಾಟಿನ (Integument system) ಒಡಲರಿಮೆ (anatomy) ಹಾಗು ಉಸಿರಿಯರಿಮೆಯನ್ನು (physiology) ತಿಳಿದುಕೊಳ್ಳೋಣ. ತೊಗಲೇರ‍್ಪಾಟಿನ ವಿಶೇಶತೆ ಎಂದರೆ, ತೊಗಲು ಕೆಲವೇ ಮಿಲಿಮೀಟರಗಳಶ್ಟು ತೆಳ್ಳಗಿದ್ದರೂ, ನಮ್ಮ ಮಯ್ಯಲ್ಲಿ ಇರುವ ಅಂಗಗಳಲ್ಲೇ ತುಂಬಾ… Read More ›

ಕೀಲು ಸವೆತದ ಬೇನೆ

– ಡಾ.ಸಂದೀಪ ಪಾಟೀಲ. ಹರೆಯ ಮುದಿಪಿನೆಡೆಗೆ ಸರಿಯಿತೆಂದರೆ ಸಾಕು ಕಾಲು-ಕೀಲು ನೋವುಗಳದ್ದೇ ಗೋಳು. ಹುರಿಕಟ್ಟು ಏರ‍್ಪಾಟಿಗೆ ಸೇರಿದ ಬೇನೆಗಳಲ್ಲಿ ಹೆಚ್ಚು ಕಂಡುಬರುವುದು ಕೀಲು ಸವೆತದ ಬೇನೆ (Osteoarthritis-OA). ಮನುಶ್ಯನ ಅಳವಿಲ್ಲದಿಕೆಗೆ (disability) ಮುಕ್ಯವಾದ ಕಾರಣ ಇದಾಗಿದೆ. ಮುಪ್ಪಾದವರಲ್ಲಿ ಕೀಲು ನೋವು, ಕೀಲು ಬಾವು ಮತ್ತು ಕೀಲು ಅಳಕುವುದು ಈ ಬೇನೆಯ ಮುಕ್ಯ ಕುರುಹುಗಳು (symptoms). ಮಯ್ಯಿಯ… Read More ›

ಕಾಪೇರ‍್ಪಾಟಿನ ಉಸಿರಿಯರಿಮೆ

– ಯಶವನ್ತ ಬಾಣಸವಾಡಿ. ಕಾಪು ಮತ್ತು ಹಾಲ್ರಸದೇರ‍್ಪಾಟು – ಬಾಗ 4: ಕಾಪೇರ‍್ಪಾಟು ಹಾಗು ಹಾಲ್ರಸದೆರ‍್ಪಾಟಿನ ಈ ಕೊನೆಯ ಕಂತಿನಲ್ಲಿ, ಕಾಪೇರ‍್ಪಾಟಿನ ಉಸಿರಿಯರಿಮೆಯ (physiology) ಬಗ್ಗೆ ತಿಳಿದುಕೊಳ್ಳೋಣ. ಕೆಡುಕುಕಣಗಳಿಂದ (pathogens) ನಮ್ಮ ಮಯ್ಯನ್ನು ಕಾಪಾಡಲು, ನಮ್ಮ ಮಯ್ ಬಗೆಬಗೆಯ ಕಾಯುವಿಕೆಯ ಹಮ್ಮುಗೆಯನ್ನು ಬಳಸುತ್ತದೆ. ಕಾಪೇರ‍್ಪಾಟಿನ ಹಮ್ಮುಗೆಯು ಕಾಯುವ ಮಯ್ ಬಾಗ ಹಾಗು ಕಾಪೇರ‍್ಪಾಟನ್ನು ಪಡೆಯುವ ಬಗೆಗಳ… Read More ›