ಉಳಿದದ್ದು ಮೂಗುತಿ ಮಾತ್ರ…

– ಶ್ವೇತ ಪಿ.ಟಿ.

mcm

ಸೀರೆಯುಟ್ಟು ನೆರಿಗೆಯೆಣಿಸಿ ಸಂಬ್ರಮಿಸಿದವಳಲ್ಲ
ದುಂಡಗೆ ಬೊಟ್ಟಿಟ್ಟು ಅದೆಶ್ಟೋ ದಿನ
ಅಡವಿಡದೆ ಉಳಿದದ್ದು ಮೂಗುತಿ ಮಾತ್ರ
ಹೆಣ್ತನದ ಹೆಗ್ಗುರತಂತೆ

ಸವಕಲು ಗಟ್ಟಿ ಕಯ್ಗಳಿವೆ
ಲೆಕ್ಕದಶ್ಟು ರೊಟ್ಟಿ ತಟ್ಟಲು
ಒಡಲ ಬೆಚ್ಚನೆ ಕಾವಿದೆ ಕೂಸ ತಟ್ಟಿ ಮಲಗಿಸಲು
ಆಶೆಯೊಂದೇ,
ನೀ ಅಪ್ಪನ ತಾಗದಿರು

ಅವನ ಜಯ್ಲು ಸೇರಿಸಿದ್ದು
ಸಾರಾಯಿ ಅಂಗಡಿಯೋ? ಇಸ್ಪೀಟಿನ ಎಲೆಯೋ?
ಬತ್ತಿದ ಬಯಕೆ, ಸೂಸಲಾಗದ ಸಿಟ್ಟು,
ನಿಟ್ಟುಸಿರ ನುಡಿ,
“ಚಟದ ಮಂದಿ ಎಲ್ಲಿದ್ದರೇನು?”

ಮತ್ತೆ ಕಾಯುವಳಾಕೆ ಮಾರನೆಯ ದಿನಕ್ಕೆ
ಮೂಡುವ ಮುಂಜಾವು ನೆನ್ನೆ ಮರೆಸಲೆಂದು
ಮನದಿ ನೂಲುವಳು ಸುಕ ಸ್ವಪ್ನ
ಮಡಿಜಡೆಯ ಹೆಣೆಯುತ್ತ ಗೊಣಗುವಳು
“ಹುಚ್ಚು ಮನಸಿಗೆ ಹೆಚ್ಚು ಆಸೆಗಳು”

(ಚಿತ್ರ: http://en.wikipedia.org/)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. BahaLa chennagide!

ಅನಿಸಿಕೆ ಬರೆಯಿರಿ:

%d bloggers like this: