ನನಸಿಗೂ ಕನಸಿನ ನೆನಸು

– ಬರತ್ ಕುಮಾರ್.

dreams2

ಕನಸು ನನಸಾದರೇನು ಚೆಂದ?
ಕನಸ ಕನವರಿಕೆಯಲ್ಲೇ ಮಿಂದು
ಕನಸನ್ನೇ ನೆನಸುತ್ತಾ ಎಂದೆಂದು
ಕನಸಲ್ಲೇ ಕಳದುಹೋದರೇನು ಕುಂದು?

ಕನಸ ಪಾಡಿಗೆ ಕನಸು
ನನಸ ಪಾಡಿಗೆ ನನಸು
ಇರಲು ಎಶ್ಟು ಸೊಗಸು
ಕನಸೆಲ್ಲವೂ ನನಸಾದರೆ
ಯಾವ ಕನಸ ಕಾಣಲಿ? ಹೇಗೆ ಕಾಣಲಿ?

ಕನಸೊಳಗೊಂದು ಕನಸು
ಅದರೊಳಗಿನ್ನೊಂದು ಕನಸು
ಕನಸ ದಾರಿಗಳು ಸಿಕ್ಕಲು, ತಿಕ್ಕಲು
ಇದನರಿತವರಿಲ್ಲ ನೆಲದೊಳು
ಆದರೂ ಮೋಜಿದು ಬಲು

ಕನಸಿಗೆ ಕಟ್ಟಲೆಯಿಲ್ಲ
ಕನಸಿಗೆ ಎಲ್ಲೆಯಿಲ್ಲ
ನನಸಿಗೂ ಕನಸಿನ ಕನಸು
ನನಸಿಗೂ ಕನಸಿನ ನೆನಸು

(ಚಿತ್ರ: http://www.purposeunlimited.com)

 

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಕನಸು ಮನಸಿನ ತಿನಿಸು

ಅನಿಸಿಕೆ ಬರೆಯಿರಿ: