ಈಗಿನ ಮಳೆ

– ಸುನಿಲ್ ಕುಮಾರ್.

rain
ಮಳೆ ಬಂತು ಮಳೆ,
ಹೇಳದೆ ಕೇಳದೆ ಬರುವ ಮಳೆ
ತೋರುವುದು ತನ್ನ ಕೋಪವ, ಜನರಿಗೆ
ಮಳೆ,ಮಳೆ, ಮಳೆ, ಮಳೆ!

ಸುಡುವ ಬಿಸಿಗಾಲದಲ್ಲಿ ಸುರಿವುದು ಮಳೆ
ಕೊರೆಯುವ ಚಳಿಗಾಲದಲ್ಲಿ ಸುರಿವ ಮಳೆ
ಬಾರೋ ಮಳೆ ಎಂದರು ಬಾರದು – ಮಳೆಗಾಲದಲಿ
ಇದೆಂತಾ ವಿಚಿತ್ರ ವರ‍್ತನೆ ನೋಡಿರಿ!

ಮನೆಮನೆಗೂ ಸೇರುವುದು ಕೊಚ್ಚೆ ನೀರಾಗಿ
ರಸ್ತೆಗಳು ತುಂಬಿ ಹರಿವುದು ನದಿಯಾಗಿ
ತರುಗಳು ನೆಲಗುರುಳುವವು ಮಳೆಯಿಂದಾಗಿ
ಇದೆಂತಾ ಮುನಿಸು ಮಳೆಯದು ನೋಡಿರಿ!

ರಸ್ತೆಯಲ್ಲಿ ವಾಹನಗಾರರಿಗೆ ಟ್ರಾಪಿಕಿನ ಕಾಟ
ಮನೆಗೆ ಹಿಂತಿರುಗುವ ಜನರಿಗೆ ಮಳೆಕಾಟ
ಜನರ ಸಾವು-ನೋವುಗಳ ಸಂಕಟ
ಇದೆಂತಾ ತೊಂದರೆ ಮಳೆಯದು ನೋಡಿರಿ!

(ಚಿತ್ರಸೆಲೆ: okwxlab.blogspot.in ) 

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 25/06/2015

    […] – ಸುನಿಲ್ ಕುಮಾರ್. […]

ಅನಿಸಿಕೆ ಬರೆಯಿರಿ: