ಕೋಗಿಲೆ ದನಿಯು ಕೇಳುತ್ತಿಲ್ಲವೇ?

ಸುನಿಲ್ ಕುಮಾರ್.

Celebrate the World

ಕೋಗಿಲೆ ದನಿಯು ಕೇಳುತ್ತಿಲ್ಲವೇ ಮಾನವ ನಿನಗೆ
ಪರಿಸರ ಜನನಿಯ ನೋವು ಕೇಳುತ್ತಿಲ್ಲವೆ ನಿನಗೆ
ಕಾನನ ಕಾಣದಾಯಿತು ಕಾನನವು ನಗರವಾಯಿತು
ಮಳೆಯು ಮರೆಯಾಯಿತು ಬುವಿಯು ಬರಡಾಯಿತು

ಸಾಗರದಾಳದಲಿ ಕಂಪಿಸಿತು ಸಾಗರವು ಉಕ್ಕಿ ಹರಿಯಿತು
ಹಿಮಾಲಯದ ಹಿಮವು ಕರಗಿತು ನದಿಯು ಉಗ್ರವೆತ್ತಿ ಹರಿಯಿತು
ತರುವು ದರೆಗುರಿಳಿತು ಕಾನನದಲಿ ಕಾಡಗಿಚ್ಚು ಹಬ್ಬಿತು
ಜೀವರಾಶಿಯ ಬುವಿಯಲಿ ಜೀವಿಯು ಸತ್ತಿತು

ರವಿಯು ಮುನಿದನು ಶಶಿಯು ಮುನಿದನು
ಕಾಲವು ಮುನಿಯಿತು ಕಾಲಪ್ರಬುವು ಮುನಿದನು
ಕೇಳಿರಿ ಕೋಗಿಲೆಯ ನುಡಿಯನು ಕಿವಿಮಾತು ನಿಮಗಿದು
ಕೇಳದ್ದಿದರೆ ನುಡಿಯನು ಅನುಬವಿಸುವಿರಿ ನೋವನು

ಕಾಲಹರಣವ ಮಾಡದೆ ಬನ್ನಿ ಕಾದಿದೆ ಕಾಲವು
ಪರಿಸರ ಸೇವೆಯನು ಮಾಡೋಣ ಬನ್ನಿ ಎಲ್ಲರು

(ಚಿತ್ರಸೆಲೆ: ccr.stanford.edu ) 

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 08/06/2015

    […] – ಸುನಿಲ್ ಕುಮಾರ್. […]

ಅನಿಸಿಕೆ ಬರೆಯಿರಿ:

Enable Notifications