ಕೇಡಿನ ಕುಡಿತ

– ಪ್ರತಿಬಾ ಶ್ರೀನಿವಾಸ್.

 

ಹೆಂಡದ ಅಮಲಲ್ಲಿ
ಹೊಡೆದನವ ಹೆಂಡತಿಗೆ
ಹೊಡೆಸಿಕೊಂಡ ಅವಳು
ಮಡಿದಳು ಮೌನದಲ್ಲೇ|

ಮಕ್ಕಳ ರೋದನೆಯ ಕೂಗು
ಮನೆಮುಂದೆ ಜನಗಳ ಸಾಲು
ಇಳಿಯಿತು ಅಮಲೇರಿದ ಹೆಂಡ
ಬಿಕ್ಕಿ ಬಿಕ್ಕಿ ಅತ್ತನೀಗ ಗಂಡ|

ಕುಡಿದು ಹೊಡೆದಾಗಲು ನೀಡುತ್ತಿದ್ದಳು
ಪ್ರೀತಿಯ ಕೈ ತುತ್ತು
ಈದೀಗ ಅವಳ ಕಾರ‍್ಯದಲ್ಲಿ
ಕಣ್ಣೀರಿಟ್ಟು ಪಿಂಡವ ಬಿಟ್ಟ|

ಮಕ್ಕಳ ದ್ವೇಶದ ಪಾಶಕ್ಕೆ ಬಂದಿಯಾದ
ಮಕ್ಕಳಿಟ್ಟ ಕಣ್ಣೀರಿನ ಜ್ವಾಲೆಗೆ
ಸುಟ್ಟು ಬೂದಿಯಾದ|

ಅರ‍್ತವಾಯಿತು ಅವನಿಗೆ ಮಡದಿಯ ಮಹತ್ವ
ಮನ್ನಿಸೆನ್ನ, ಮರಳಿ ಬಾ ‘ಚಿನ್ನ’
ಮನೆಯ ಹೊಸ್ತಿಲಲಿ ನಿಂತು
ಕೂಗು ‘ರೀ’ ಎಂದು ನನ್ನ

ಮಡದಿಯ ಮನದಲೆ ನೆನೆದು
ಹೆಂಡದಂಗಡಿಗೆ ಹೆಜ್ಜೆಯಿಟ್ಟ
ಕುಡಿದು ಬರುವ ನಿದಾನ ಗತಿಗೂ
ಲಾರಿ ಹೊಡೆದ ರಬಸದ ಸ್ತಿತಿಗೂ

ರಸ್ತೇ ಮದ್ಯ ಸಾಯುವ ಪರಿಯಲಿ
ಹೆಂಡದ ಅಮಲು ಇಳಿಯತೊಡಗಿತು
ಹೆಂಡತಿಯ ಅಮಲಲ್ಲಿ ಜೀವ ಬಿಟ್ಟಿತು|

(ಚಿತ್ರ ಸೆಲೆ: behance.net)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. smhamaha says:

    ಅಬ್ಬಾ!, ಸಾಲುಗಳ ಹಿಂದೆ ಕಣ್ಣಿಗೆ ಕಟ್ಟುವ ಆ ಭಯಂಕರ ಸಂಗತಿಗಳು…ತುಂಬಾ ಸೊಗಸಾಗಿ ಮುಡಿಬಂದಿದೆ..ಹೆಂಡತಿಯೊಲುಮೆಯ ಭಾಗ್ಯವನರಿಯದ ಗಂಡಿಗೆ ಜಯವಿಲ್ಲ

ಅನಿಸಿಕೆ ಬರೆಯಿರಿ: