ಮಾಡಿ ಸವಿಯಿರಿ ಹೆಸರುಕಾಳಿನ ಉಂಡೆ

– ರೂಪಾ ಪಾಟೀಲ್.

ಹಬ್ಬ ಬಂದರೆ ಮನೆಗಳಲ್ಲಿ ಹಬ್ಬದ ತಿಂಡಿಗಳದ್ದೇ ಜೋರು. ನಾಗರ ಪಂಚಮಿ ಹಬ್ಬ ಇದಕ್ಕೆ ಹೊರತಲ್ಲ. ಬೇರೆ ಹಬ್ಬಗಳಿಗೆ ಹೋಲಿಸಿ ನೋಡಿದರೆ ನಾಗರ ಪಂಚಮಿಯ ವಿಶೇಶ ಎಂದರೆ ಉಂಡೆಗಳು. ಹೆಸರುಕಾಳಿನ ಉಂಡೆ ಮಾಡುವುದು ಹೇಗೆಂದು ನೋಡಿ, ಮಾಡಿ ಸವಿಯಿರಿ.

ಬೇಕಾಗುವ ಅಡಕಗಳು

  • ಹೆಸರು ಕಾಳು 4 ಬಟ್ಟಲು
  • ಬೆಲ್ಲ ಅತವಾ ಸಕ್ಕರೆ 3 ಬಟ್ಟಲು
  • ತುಪ್ಪ 2-3 ಬಟ್ಟಲು
  • ಒಣದ್ರಾಕ್ಶಿ 10-15
  • ಏಲಕ್ಕಿ 4-5

ಮಾಡುವ ಬಗೆ

ಹೆಸರು ಕಾಳನ್ನು ಚೆನ್ನಾಗಿ ಹುರಿದುಕೊಂಡು ಬೇಳೆ ಮಾಡಿಕೊಳ್ಳಬೇಕು. ಹುರಿದ ಹೆಸರು ಕಾಳನ್ನು ಮಿಕ್ಸಿ ಜಾರ್ ನಲ್ಲಿ ಹಾಕಿ 7-8 ಸೆಕೆಂಡು ತಿರುವಿಕೊಂಡರೆ ಹೆಸರು ಬೇಳೆ ಸಿದ್ದ. ಹೀಗೆ ತಯಾರಿಸಿಕೊಂಡ ಹೆಸರು ಬೇಳೆಯ ಸಿಪ್ಪೆ ಬೇರ್ಪಡಿಸಿ ಹಿಟ್ಟು ತಯಾರಿಸಿಕೊಳ್ಳುವುದು.

ಮೊದಲು ಕಾದ ಬಾಣಲೆಗೆ ತುಪ್ಪ ಹಾಕಿಕೊಳ್ಳಬೇಕು. ತುಪ್ಪ ಸ್ವಲ್ಪ ಬಿಸಿಯಾಗುತ್ತಿದ್ದಂತೆ ಅದಕ್ಕೆ ಹಿಟ್ಟನ್ನು ಹಾಕಿ 10-15 ನಿಮಿಶಗಳವರೆಗೆ ಕಲಸುವುದು. ಹಿಟ್ಟು ಸ್ವಲ್ಪ ಕೆಂಬಣ್ಣಕ್ಕೆ ಬಂದ ಮೇಲೆ ಕೆಳಗಿಳಿಸಿ, ತಣ್ಣಗಾಗುವರೆಗೆ ಬಿಡುವುದು. ಹಿಟ್ಟು ಸಂಪೂರ‍್ಣವಾಗಿ ತಣ್ಣಗಾದ ಮೇಲೆ ಅದಕ್ಕೆ ಸಣ್ಣಗೆ ಪುಡಿಮಾಡಿಕೊಂಡಿರುವ ಬೆಲ್ಲ ಅತವಾ ಸಕ್ಕರೆ, ಒಣದ್ರಾಕ್ಶಿ, ಏಲಕ್ಕಿ ಪುಡಿಯನ್ನು ಹಾಕಿ, ಚೆನ್ನಾಗಿ ಕೈಯಿಂದ ತಿಕ್ಕಿ ಪುಡಿ ಮಾಡಿಕೊಳ್ಳುವುದು. ಈ ಪುಡಿಯನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಉಂಡೆ ತಯಾರಿಸಿಕೊಳ್ಳುವುದು. ಹೀಗೆ ಮಾಡಿದರೆ ರುಚಿರುಚಿಯಾದ ಹೆಸರು ಉಂಡೆ ಸವಿಯಲು ತಯಾರು.

(ಚಿತ್ರ ಸೆಲೆ: ರೂಪಾ ಪಾಟೀಲ್)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: