ಕವಿತೆ: ರೆಡಿಯೋ

– .

ರೇಡಿಯೋ, ಬಾನುಲಿ, radio

ಮಣ್ಣಿನ ಮನೆ ಇರಲಿ
ಮಾಳಿಗೆ ಮನೆ.‌‌. ಮಹಲುಗಳೆ
ಇರಲಿ…. ಆ ದಿನಗಳಲಿ
ಮಾತನಾಡುವ ಮಾಯಾ ಪೆಟ್ಟಿಗೆ
ಉಚ್ಚ ನೀಚ ಎಂದೆಣಿಸದೆ
ಎಲ್ಲರ ಮನೆಯಲು ಉಲಿಯುತ
ಮನೆ ಮನಗಳ ತಣಿಸುತಲಿದ್ದೆ
ಎಲ್ಲರಿಗೂ ಕೈಗೆಟಕುವ ಬೆಲೆಯಲ್ಲಿ

ನಿನ್ನ ಉಲಿತದ ಸುಮದುರ
ಮಾತು ಕೇಳಲು ಸ್ವಸ್ತ
ಮತ್ತು ಶ್ರೀಮಂತವಾಗಿದೆ
ದೇಶದ ಮೂಲೆಮೂಲೆಗೂ
ತಲುಪುವ ನೀನು ಅಶ್ಟೆ
ಸಸ್ತಾ ಮತ್ತು ವಿಶಿಶ್ಟವಾಗಿದ್ದಿ

ಹಾಡಿನಿಂದ ಹಿಡಿದು
ಹಾಡಿಯ ಸುದ್ದಿಯವರೆಗೆ
ಆಟದಿಂದ ಹಿಡಿದು ಮಕ್ಕಳ
ಪಾಟದವರೆಗೆ… ನಾಟ್ಯದಿಂದ
ಹಿಡಿದು ನಾಟಕದವರೆಗೆ‌.
ನಿನ್ನ ಬಾನುಲಿಯ ಉಲಿತ
ಅದೇನು ಚಂದ! ಅದೇನು ಅಂದ!
ಕೇಳುಗರಿಗದು ಕರ‍್ಣಾನಂದ

ನೀನು ಅಂದಾಗಲಿ
ಇಂದಾಗಲಿ ಎಂದೆಂದಿಗಾಗಲಿ
ಟಿವಿ, ನೆಟ್, ಲ್ಯಾಪ್‌ಟಾಪ್
ನಡುವೆಯೂ ಕಮಲದಂತೆ
ಅರಳಿ ನಗುತಲಿದ್ದಿ
ಮತ್ತು ಅವುಗಳೆಲ್ಲದರ
ನಡುವೆಯೂ ನಿನ್ನ
ಆಲಿಸುವ ಕಿವಿಗಳ ಸೊಗಡು
ಸುಮದುರವಾಗಿ ಸೊಗಸಾಗಿ
ಇಟ್ಟಿದ್ದಿ… ಮತ್ತು ಎತ್ತರದ ಮೌಲ್ಯ
ಹೊಂದಿದ್ದಿ

ಸಾಗಲಿ ನಿನ್ನ ಉಲಿತ ನಿತ್ಯ
ನೂತನವಾಗಿ ಜಗದಗಲಕೂ
ಬಾನಂಗಳದ ಮೇಗದೂತನಂತೆ
ಇರಲಿ ನಿನ್ನ ಅಮರತ್ವ
ಈ ಜಗದಲಿ
ಮನುಕುಲ ಈ ಬುವಿಯಲಿ
ಇರುವವರೆಗೆ
ಮನುಕುಲ ಈ ಬುವಿಯಲಿ
ಇರುವವರೆಗೆ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: