ಶುಂಟಿ ಮೆಣಸಿನ ಕಡುಬು
– ರೂಪಾ ಪಾಟೀಲ್.
ಬೇಕಾಗುವ ಸಾಮಾನುಗಳು
- ಗೋದಿ ಹಿಟ್ಟು – 2 ಬಟ್ಟಲು
- ಬೆಲ್ಲ – 1 ಬಟ್ಟಲು
- ತುರಿದ ಒಣ ಕೊಬ್ಬರಿ – 5 ಚಮಚ
- ಪುಡಿ ಮಾಡಿದ ಏಲಕ್ಕಿ
- ಕಾಳು ಮೆಣಸು – 4-5
- ಒಣ ಶುಂಟಿ – 1 ಚಮಚ
- ಉಪ್ಪು ಮತ್ತು ನೀರು
- ಸ್ವಲ್ಪ ಹುರಿದು ಪುಡಿ ಮಾಡಿದ ಗಸಗಸೆ ಮತ್ತು ಸೋಂಪು ಕಾಳು
ಮಾಡುವ ಬಗೆ
ಮೊದಲು ಗೋದಿ ಹಿಟ್ಟು, ರುಚಿಗೆ ತಕ್ಕಶ್ಟು ಉಪ್ಪು, ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ತರಹ ಹಿಟ್ಟು ತಯಾರಿಸಿಕೊಳ್ಳಬೇಕು. ನಂತರ ಇದಕ್ಕೆ ಕೊಬ್ಬರಿ ಬೆಲ್ಲದ ಮಿಶ್ರಣ, ಮೆತ್ತಗೆ ಪುಡಿ ಮಾಡಿಕೊಂಡ ಬೆಲ್ಲ, ಒಣ ಕೊಬ್ಬರಿ, ಮೆಣಸು, ಏಲಕ್ಕಿ, ಶುಂಟಿ, ಗಸಗಸೆ, ಸೋಂಪು ಕಾಳು ಎಲ್ಲವನ್ನು ಸೇರಿಸಿದರೆ ಮಿಶ್ರಣ ತಯಾರಾಗುತ್ತದೆ. ಈಗ ಗೋದಿ ಹಿಟ್ಟಿನಿಂದ ದುಂಡನೆಯ ಚಪಾತಿ ತಯಾರಿಸಿಕೊಂಡು ಅದನ್ನು ನಾಲ್ಕು ಸಮಬಾಗಗಳಾಗಿ ಮಡಚಿಕೊಂಡು ಮದ್ಯಕ್ಕೆ ಬೆಲ್ಲದ ಮಿಶ್ರಣ ಹಾಕಿ ಮೂರು ಅಂಚುಗಳನ್ನು ಸಮೋಸಾ ರೀತಿಯಲ್ಲಿ ಸೇರಿಸಬೇಕು. ಹೀಗೆ ತಯಾರಿಸಿದ ಕಡುಬುಗಳನ್ನು ಹಬೆಯಲ್ಲಿ ಬೇಯಿಸಿದರೆ ಸಾಕು, ರುಚಿಕರವಾದ ಶೀತ ನೆಗಡಿಗೆ ಮನೆ ಮದ್ದಾಗಿರುವ ಆಹಾರ ತಯಾರು. ಈ ವಿಶೇಶವಾದ ಸಿಹಿ ಅಡುಗೆ ಆರೋಗ್ಯಕ್ಕೆ ಹಿತಕರವಾಗಿ ಮತ್ತು ಬಾಯಿಗೆ ಸಿಹಿಯಾಗಿ ಇರುವುದು.
ಇತ್ತೀಚಿನ ಅನಿಸಿಕೆಗಳು