ಕವಿತೆ: ನವಚೇತನ

– ವೆಂಕಟೇಶ ಚಾಗಿ.

 

ಈ ಹ್ರುದಯದ
ಬಾಗಿಲು ತೆರೆದಿರುವಾಗ
ಆ ಹೆಸರು
ಮೆಲ್ಲನೆ ನುಸುಳಿ
ಹ್ರುದಯದ ಬಾವನೆಗಳಿಗೆ
ಬಣ್ಣ ತುಂಬಿದೆ

ಹೊಸ ಚೈತ್ರಮಾಸದ ಹೊಳಪು
ಹೊಸ ಹುರುಪು ನವ ಚೈತನ್ಯವು
ಮೂಡಿ ಹಬ್ಬದೋತ್ಸಾಹ ತಂದಿದೆ
ಆಸೆಗಳು ರೆಕ್ಕೆಗಳ ಪಡೆದು
ಆಗಸದೆತ್ತರಕೆ ಹಾರಲು
ಹವಣಿಸುತ್ತಿವೆ

ಹ್ರುದಯದ ಅಂಬರದಲ್ಲಿ
ಸೋನೆ ಮಳೆಯು ಸುರಿದು
ಕಾಮನಬಿಲ್ಲಿನ ರಂಗಿನಲಿ
ಕನಸುಗಳು ಮಿಂದೇಳುತಿವೆ
ಹಳೆಯ ಕನಸುಗಳಿಗೆ
ಹೊಸ ಕನಸುಗಳು ಹೊಸ
ಸಂಬಂದ ಬೆಳೆಸುತಿವೆ

ಕಲ್ಪನೆಗಳು ಜೀವತಳೆದು
ಮೊಳಕೆಯೊಡೆದು ಮಿಂಚಿನಲಿ
ಹೊಸ ಚಿಗುರಿನ ಜಾಡಿನಲಿ
ದುಂಬಿಗಳು ನಲಿದಿವೆ ಕನಸಿವೆ
ಹೂಗಳು ಅರಳುವ ಮುನ್ಸೂಚನೆಗೆ
ಉಸಿರಿನ ತಾಳ ಹಾಕುತಿವೆ
ಕನಸುಗಳ ಕಟ್ಟಿ ಸಂಬ್ರಮಿಸುತಿವೆ

ಹಾಗೆಯೇ ಸಣ್ಣ ಬಯವೊಂದು
ಮನದ ಯಾವುದೋ ಮೂಲೆಯಲ್ಲಿ
ಕಂಡು ಕಾಣದಂತೆ ಜನಿತವಾಗಿದೆ
ಆ ಹೆಸರಿಗೂ ಈ ಉಸಿರಿಗೂ
ಯಾತರದು ಸಂಬಂದ?
ಆ ಹೆಸರಿಗೊಂದು ಬಂದನವೋ
ಸೆಳೆತವೋ ಬೇಕಾಗಿದೆ ಎಂದೆನಿಸಿದೆ
ಜೊತೆಗೆ ಒಂದು
ಪ್ರಾರ‍್ತನೆಯೊಂದಿಗೆ…

(ಚಿತ್ರ ಸೆಲೆ: fearlessmotivation.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: