ಮಾಡಿ ನೋಡಿ ಮೆಂತೆ ರೊಟ್ಟಿ

– ವಿಜಯಮಹಾಂತೇಶ ಮುಜಗೊಂಡ.

ಬೇಕಾಗುವ ಸಾಮಾನುಗಳು

ಗೋದಿ ಹಿಟ್ಟು – 2 ಲೋಟ
ಮೆಂತೆ ಸೊಪ್ಪು – 1 ಕಪ್
ಮೊಸರು – 1/4 ಲೋಟ
ಅರಿಶಿಣ ಪುಡಿ – 1/2 ಚಮಚ
ಹಸಿ ಮೆಣಸಿನ ಕಾಯಿ – 5-6
ಶುಂಟಿ – 1 ಇಂಚು
ಬೆಳ್ಳುಳ್ಳಿ – 8-10 ಎಸಳು
ಜೀರಿಗೆ – 2 ಚಮಚ
ದನಿಯಾ ಪುಡಿ – 1 ಚಮಚ
ಅಜಿವಾಯಿನ್ – 1ಚಮಚ
ಉಪ್ಪು – ರುಚಿಗೆ ತಕ್ಕಶ್ಟು
ಎಳ್ಳು – 2 ಚಮಚ
ಕರಿಬೇವು  – ಸ್ವಲ್ಪ
ಕೊತ್ತಂಬರಿ – ಸ್ವಲ್ಪ
ಎಣ್ಣೆ – 4-5 ಚಮಚ

ಮಾಡುವ ಬಗೆ

ಮೊದಲು ಮೆಂತೆ ಸೊಪ್ಪನ್ನು ತೊಳೆದು ಬಿಡಿಸಿ, ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಿ. ಹಸಿ ಮೆಣಸಿನ ಕಾಯಿ, ಶುಂಟಿ, ಬೆಳ್ಳುಳ್ಳಿ, ಕರಿಬೇವು, ಕೊತ್ತಂಬರಿ, ಜೀರಿಗೆ ಎಲ್ಲವನ್ನೂ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಪೇಸ್ಟ್ ಮತ್ತು ಕತ್ತರಿಸಿದ ಮೆಂತೆ ಸೊಪ್ಪನ್ನು ಗೋದಿ ಹಿಟ್ಟಿಗೆ ಹಾಕಿ, ಮೊಸರು, ದನಿಯಾ ಪುಡಿ, ಅಜಿವಾಯಿನ್, ರುಚಿಗೆ ತಕ್ಕಶ್ಟು ಉಪ್ಪು, ಎಳ್ಳು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹಿಟ್ಟನ್ನು 15 ನಿಮಿಶ ನೆನೆಯಲು ಬಿಡಿ.

ಕಲಸಿದ ಹಿಟ್ಟನ್ನು ಚಪಾತಿ ಹಾಗೆ ಲಟ್ಟಿಸಿಕೊಂಡು, ತವೆ ಬಿಸಿ ಮಾಡಿ, ಒಂದು ಚಮಚ ಎಣ್ಣೆ ಇಲ್ಲವೇ ತುಪ್ಪ ಹಾಕಿ ಎರಡೂ ಬದಿ ಒಂದೆರಡು ನಿಮಿಶ ಚೆನ್ನಾಗಿ ಬೇಯಿಸಿ. ಬಿಸಿ ಬಿಸಿ ಮೆಂತೆ ರೊಟ್ಟಿಯನ್ನು ಮೊಸರು, ಉಪ್ಪಿನ ಕಾಯಿ, ಕೊಬ್ಬರಿ ಚಟ್ನಿ ಇಲ್ಲವೇ ಸಾಸ್‌ನೊಂದಿಗೆ ಸವಿಯಿರಿ. ಹಾಗೆಯೇ ತಿನ್ನಲೂ ಚೆನ್ನಾಗಿರುತ್ತದೆ. ಮಕ್ಕಳಿಗೆ ತುಂಬಾ ಹಿಡಿಸುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: