ದೊಡ್ಡ ಪತ್ರೆ ಗೊಜ್ಜು

– ಸವಿತಾ.

ಬೇಕಾಗುವ ಸಾಮಾನುಗಳು

ದೊಡ್ಡ ಪತ್ರೆ ಅತವಾ ಅಜೀವಾಯಿನ್ ಎಲೆ – 8
ಹಸಿ ಕೊಬ್ಬರಿ ತುರಿ – 1 ಬಟ್ಟಲು
ಎಳ್ಳು – 1 ಚಮಚ
ಸಾಸಿವೆ – 1 ಚಮಚ
ಕೊತ್ತಂಬರಿ ಬೀಜ – 1 ಚಮಚ
ಕರಿ ಮೆಣಸಿನ ಕಾಳು – 1 ಚಮಚ
ಕಡಲೇಬೇಳೆ – 2 ಚಮಚ
ಉದ್ದಿನ ಬೇಳೆ – 1 ಚಮಚ
ಒಣ ಮೆಣಸಿನ ಕಾಯಿ – 2
ಇಂಗು ಸ್ವಲ್ಪ
ಅರಿಶಿಣ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಶ್ಟು
ಹುಣಸೆ ರಸ – 2 ಚಮಚ
ಬೆಲ್ಲ – 1 ಚಮಚ
ಎಣ್ಣೆ – 2 ಚಮಚ

ಮಾಡುವ ಬಗೆ

ಒಂದು ಚಮಚ ಎಣ್ಣೆ ಬಾಣಲೆಗೆ ಹಾಕಿ, ಸಣ್ಣ ಉರಿಯಲ್ಲಿ ಕಡಲೇ ಬೇಳೆ, ಸಾಸಿವೆ, ಉದ್ದಿನ ಬೇಳೆ, ಒಣ ಮೆಣಸಿನ ಕಾಯಿ, ಕರಿಮೆಣಸಿನ ಕಾಳು, ಎಳ್ಳು, ಕೊತ್ತಂಬರಿ ಬೀಜ, ಇಂಗು, ದೊಡ್ಡ ಪತ್ರೆ ಎಲೆ ಹಾಕಿ ಹುರಿದು ತೆಗೆಯಿರಿ. ನಂತರ ಹುರಿದ ಮಿಶ್ರಣ ಮತ್ತು ಹಸಿ ಕೊಬ್ಬರಿ ತುರಿ, ಹುಣಸೆ ರಸ, ಬೆಲ್ಲ, ಉಪ್ಪು ಸೇರಿಸಿ ಮಿಕ್ಸರ್ ನಲ್ಲಿ ರುಬ್ಬಿ ತೆಗೆಯಿರಿ.

ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಉದ್ದಿನ ಬೇಳೆ, ಸ್ವಲ್ಪ ಅರಿಶಿಣ ಹಾಕಿ ಒಗ್ಗರಣೆ ಮಾಡಿ. ರುಬ್ಬಿದ ಮಿಶ್ರಣ ಸೇರಿಸಿ ಸ್ವಲ್ಪ ಬಿಸಿ ಮಾಡಿ ಒಲೆ ಆರಿಸಿ. ಈಗ ದೊಡ್ಡ ಪತ್ರೆ ಗೊಜ್ಜು ತಯಾರು. ಅನ್ನ ಇಲ್ಲವೇ ಚಪಾತಿ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: