ಕವಿತೆ: ಕಲಿಯಬೇಕಿದೆ

– .

Life, ಬದುಕು

ಬಂದವರೊಡನೆ ಜೊತೆಯಾಗಿ
ಬರದಿರುವವರನ್ನು ಬಿಟ್ಹಾಕಿ
ಬದುಕಿನ ಪಯಣ ಸಾಗಬೇಕಿದೆ

ನಂಬಿದವರಿಗೆ ಇಂಬನಿಟ್ಟು
ನಂಬದವರಿಗೆ ಚೊಂಬು ಕೊಟ್ಟು
ಜೀವನ ಬಂಡಿಯ ಹತ್ತಬೇಕಿದೆ

ಬೇಕೆಂದು ಬಂದವರೊಡನೆ ಬೆರೆತು
ಬೇಡವೆಂದು ಹೋದವರ ಮರೆತು
ಬಾಳಿನ ರಸದೂಟ ಸವಿಯಬೇಕಿದೆ

ನಮ್ಮನ್ನು ಅರಿತವರೊಡನೆ ಕೂಡಿ
ನಮ್ಮನ್ನು ದೂರಿದವರ ದೂಡಿ
ಬದುಕಿನ ವ್ಯಾಪಾರವ ಮಾಡಬೇಕಿದೆ

ಒಳಿತರಲ್ಲಿ ಕೆಡುಕುಗಳ ಹುಡುಕದೇ
ಕೆಡುಕುಗಳಲ್ಲಿ ಒಳಿತುಗಳ ನೋಡದೇ
ಜೀವನ ಲೆಕ್ಕಾಚಾರ ಹಾಕಬೇಕಿದೆ

ಹಿರಿಯರ ಅನುಬವ ಮಾರ‍್ಗದರ‍್ಶನದಿ
ಕಿರಿಯರ ಸರಿ ತಪ್ಪುಗಳ ತಿದ್ದಿ ತೀಡಿ
ಬಾಳಿನ ಪಾಟವನ್ನು ಕಲಿಯಬೇಕಿದೆ

(ಚಿತ್ರ ಸೆಲೆ: fearlessmotivation.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Jeevan says:

    ಸೊಗಸಾಗಿದೆ!

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *