ಮಾಡಿ ನೋಡಿ ಕಾರ ಮೊಟ್ಟೆ

– ನಿತಿನ್ ಗೌಡ.

ಬೇಕಾಗುವ ಸಾಮಾನುಗಳು

 • ಮೊಟ್ಟೆ – 4
 • ಕಾರದ ಪುಡಿ – 2-3 ಚಮಚ
 • ಸೋಯಾ ಸಾಸ್ – ಸ್ವಲ್ಪ
 • ಅರಿಶಣ – 1/2 ಚಮಚ
 • ಕೊತ್ತಂಬರಿ ಬೀಜ – 1 ಚಮಚ
 • ಈರುಳ್ಳಿ – 1/2
 • ಚಕ್ಕೆ –  1 ಇಂಚು
 • ಲವಂಗ – 3
 • ಶುಂಟಿ – 2 ಇಂಚು
 • ಬೆಳ್ಳುಳ್ಳಿ – 10-12 ಎಸಳು
 • ಕಾಳುಮೆಣಸು  – ಸ್ವಲ್ಪ (ಬೇಕಾದ್ದಲ್ಲಿ ಮಾತ್ರ)
 • ಉಪ್ಪು – ರುಚಿಗೆ ತಕ್ಕಶ್ಟು
 • ಟೊಮೊಟೊ ಪ್ಯೂರಿ/ಗಸಿ – 2-3 ಟೊಮೊಟೊ / ಕಾಲು ಕಪ್ಪು
 • ತುಪ್ಪ/ಎಣ್ಣೆ –  6-8 ಚಮಚ

ಮಾಡುವ ಬಗೆ

ಮೊದಲಿಗೆ ಒಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಚಕ್ಕೆ, ಲವಂಗ, ಶುಂಟಿ, ಬೆಳ್ಳುಳ್ಳಿ, ಕೊತ್ತಂಬರಿ ಬೀಜ(ದನಿಯಾ), ಕಾಳುಮೆಣಸು ಮತ್ತು ಈರುಳ್ಳಿಯನ್ನು ಹಾಕಿ ಬಾಡಿಸಿಕೊಳ್ಳಿರಿ. ಇದಕ್ಕೆ ಕಾರದ ಪುಡಿ, ಅರಿಶಿಣ ಮತ್ತು ಉಪ್ಪನ್ನು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿರಿ. ಆಮೇಲೆ ಟೋಮೋಟೋವನ್ನು ರುಬ್ಬಿಕೊಳ್ಳಿ(ದಪ್ಪಗೆ). ಹೀಗೆ ಮಾಡುವ ಜೊತೆ ಜೊತೆಯಲ್ಲಿ, ಮೊಟ್ಟೆಗಳನ್ನು ನೀರೊಳಗೆ ಬೇಯಿಸಿಕೊಳ್ಳಲು ಇಡಿ.

ಈಗ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಅದು ಕಾದ ಕೂಡಲೆ ರುಬ್ಬಿಟ್ಟುಕೊಂಡ ಮಸಾಲೆ ಹಾಕಿ,ಸೋಯಾ ಸಾಸ್ ಹಾಕಿ ಹುರಿದುಕೊಳ್ಳಿರಿ. ಈಗ ಇದಕ್ಕೆ ಚೂರು ಎಣ್ಣೆ ಹಾಕಿ, ಟೋಮೋಟೋ ಹಾಕಿ, ಹುರಿದುಕೊಳ್ಳಿ. ಇದ ಹಸಿ ಗಮ ಬಿಟ್ಟೊಡನೆ; ಬೇಯಿಸಿಕೊಂಡ ಮೊಟ್ಟೆಗಳಿಗೆ ಕಚ್ಚು ಹಾಕಿಕೊಳ್ಳಿರಿ(ಚಿಕ್ಕದಾಗಿ ಕೊಯ್ಯಿರಿ). ಆಮೇಲೆ ಇದಕ್ಕೆ ಈ ಕಾರ ಮಸಾಲೆ ಯನ್ನು ಸವರಿ, ಇನ್ನೊಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಹುರಿದುಕೊಳ್ಳಿರಿ. ಆಮೇಲೆ ಈ ಮೊಟ್ಟೆಗಳನ್ನು ಉಳಿದ ಕಾರ ಮಸಾಲೆಗೆ ಸೇರಿಸಿ. ಈಗ ಕಾರ ಮೊಟ್ಟೆ ತಯಾರಿದ್ದು, ಅನ್ನದ ಜೊತೆ ತಿನ್ನಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: