ಕವಿತೆ: ಇಂದೇ ಬದುಕು
ಮುಂದೆ ಸಾಗುವ ಈ ಬಾಳಲಿ
ಹಿಂದಿನ ಬವಣೆಯ ಮಾತೇಕೆ
ಇಂದೇ ಬದುಕು ಈ ಬಾಳಲಿ
ಚಟಗಳ ಬೆನ್ನತ್ತಿ ನೊಂದು
ದೇಹವ ನೋಯಿಸಬೇಡ
ಲಾಬವಿಲ್ಲ ನಶ್ಟವೇ ಬದುಕೆಲ್ಲ
ಅವರಿವರ ನೋಡಿ ಅಸೂಯೆ ಬೇಡ
ಅಸೂಯೆ ನಿನ್ನ ದಾರಿಯಲ್ಲ
ಪರಿಶ್ರಮವೆಂಬ ರಹದಾರಿಯಿರುವಾಗ
ಆಸೆಗಳಿರಲಿ ಬದುಕಿನ ಬಂಡಿಯಲಿ
ಆಸೆಗಳಿಗಾಗಿ ಬದುಕಲ್ಲ
ಇರುವುದ ನೆನೆದು ಬದುಕಬಹುದಲ್ಲ.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು