ವಚನಗಳು
***ಸದ್ಗುರು***
ನೇರ ನುಡಿಯ ತತ್ವವು
ದೀರ ನಡೆಯ ವ್ಯಕ್ತಿತ್ವವು
ಕಾಯಕ ಕಾಲ ಕಾಸಿನ ಮಹತ್ವವು
ನ್ಯಾಯ ನೀತಿ ದರ‍್ಮದ ಸಿದ್ದಾಂತವು
ಸತ್ಯ ನಿಶ್ಟೆ ಪ್ರಾಮಾಣಿಕತೆಯ ವೇದಾಂತವು
ನಿತ್ಯ ನಿಯಮವಾಗಿಸಿ ಬಾಳಿದರೆಮ್ಮ
ಶ್ರೀ ಶ್ರೀ ಶ್ರೀ ತರಳಬಾಳು ಸದ್ಗುರುವು
***ಚಿನ್ಮಯ ರೂಪ***
ಮನದಂದಕಾರ ಬರಡು ಬೂಮಿ ನೋಡಿ
ಅನುಬವದ ಎತ್ತಗಳ ನೇಗಿಲನು ಹೂಡಿ
ಜ್ನಾನದ ಬೀಜವನು ಬಿತ್ತನೆಯ ಮಾಡಿ
ಗನಮ್ರುತದ ಪಸಲನು ಬೆಳೆದು ಕಾಪಾಡಿ
ಎನ್ನಮತಿಯ ಹಸಿವನು ನೀಗಿದ ಗುರುವೇ
ಚಿನ್ಮಯ ರೂಪ ಶ್ರೀ ತರಳಬಾಳು ಸದ್ಗುರುವೇ
***ಪರಂಜ್ಯೋತಿ***
ಕಾಮ ಕ್ರೋದಾದಿಗಳನು ಸುಟ್ಟು
ಕಾವಿ ಬಟ್ಟೆಯನು ತಾನು ತೊಟ್ಟು
ಕಾಲ ಜ್ನಾನದ ವಿಬೂತಿಯ ದರಿಸಿ
ಕಾಲನ ಜಯಿಸುವ ಮಾರ‍್ಗವ ಬೋದಿಸಿ
ಬಕ್ತರ ಹ್ರುದಯ ಸಿಂಹಾಸನವೇರಿದೆ
ಬಕ್ತಿಯ ಪರಂಜ್ಯೋತಿಯನು ಬೆಳಗಿದೆ
ಶ್ರೀ ತರಳಬಾಳು ಸದ್ಗುರುವೇ ಜಗದ
ತರಳರನು ಸನ್ಮಾರ‍್ಗದಲ್ಲಿ ನಡೆಸಿದೆ
***ಗನಮಹಿಮ***
ಮನವೆಂಬ ಬರಡು ಬೂಮಿಯಲ್ಲಿ
ಮನಸಾಕ್ಶಿಯೆಂಬ ನೇಗಿಲನೂಡಿ
ಮನೋವಿಕಾರದ ಕಳೆಗಳನು ಕಿತ್ತೆಸೆದು
ಮಾನವೀಯತೆಯ ಬೀಜಗಳನು ಬಿತ್ತಿ
ಮನುಶ್ಯತ್ವದ ಬೆಳೆಯನು ಬೆಳೆದು
ಮನದ ಬೂಮಿ ಪಲವತ್ತೆಂದು ಸಾರಿದರೆಮ್ಮ
ಗನಮಹಿಮ ಶ್ರೀ ತರಳಬಾಳು ಸದ್ಗುರುವು
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು