ವಚನಗಳು

– .

ದೇವರು. ಪ್ರಾರ‍್ತನೆ, ಕೋರಿಕೆ, prayer, god

***ಮರೆತರೆ***

ಕಾವಿಯ ತೊಟ್ಟರೇನಯ್ಯ
ಕಾಮದ ಮನವ ಬಿಡದಿರೆ
ಕಾದಿಯ ಉಟ್ಟರೇನಯ್ಯ
ಗಾದಿಯ ಆಸೆಯ ಬಿಡದಿರೆ
ಕಾಕಿಯ ದರಿಸಿದರೇನಯ್ಯ
ಶೋಕಿಯ ಲಂಚವ ಬಿಡದಿರೆ
ಬಕ್ತರಂತೆ ನಾಮವ ಹಾಕಿದರೇನಯ್ಯ
ಶಿವ ಶರಣರನು ಅರಿಯದಿರೆ
ಮಾನವರಾಗಿ ಹುಟ್ಟಿದರೇನಯ್ಯ
ಶ್ರೀತರಳಬಾಳು ಸದ್ಗುರುವ ಮರೆತರೆ

***ಶರಣೆಂಬೆ***

ಬಕ್ತರ ಹ್ರುದಯ ಸಿಂಹಾಸನವೇರಿದ ಗುರುವೇ
ಜನರ ಮನೆಮನದಿ ಪೂಜಿಸುವ ಮಹಾಗುರುವೇ
ತರಳರ ಬಾಳನುದ್ದರಿಸಲು ಬಂದ ಜಗದ್ಗುರುವೇ
ಕಾಯಕ ಕಾಲ ಕಾಸಿನ ಮಹತ್ವ ಸಾರಿದ ಪ್ರಬುವೇ
ಶ್ರೀ ತರಳಬಾಳು ಸದ್ಗುರುವೇ ಶರಣು ಶರಣೆಂಬೆ

***ಪೊರೆಯುವರು***

ಮಾರ‍್ಜಾಲ ತನ್ನ ಮರಿಯನು
ಮಮತೆಯಿಂದ ರಕ್ಶಿಸುವಂತೆ
ಮರ‍್ಕಟದ ಮರಿಯು ತನ್ನಯ
ಮಾತೆಯನು ಆಶ್ರಯಿಸುವಂತೆ
ಮತ್ಸ್ಯದ ಮರಿಯು ತನ್ನಯ
ವಾತ್ಸಲ್ಯದ ತಾಯಿಯ ಸ್ಮರಿಸುವಂತೆ
ಶ್ರೀ ತರಳಬಾಳು ಸದ್ಗುರುವು ತನ್ನಯ
ಶಿಶ್ಯರ ತಪ್ಪು ಒಪ್ಪುಗಳನು ಪರಿಶೀಲಿಸಿ
ಮಾರ‍್ಜಾಲ, ಮರ‍್ಕಟ, ಮತ್ಸ್ಯಗಳ
ಕಿಶೋರ ನ್ಯಾಯದ ತರಹ ಪೊರೆಯುವರು

***ಪುರುಶಾರ‍್ತ***

ದರ‍್ಮದ ದರೆಯೊಳಗೆ
ಅರ‍್ತದ ಬೇರು ಬಿಟ್ಟು
ಕಾಮದ ಮರವಾಗಿ
ಮೋಕ್ಶದ ಪಲ ಬಿಟ್ಟರೆ
ಪುರುಶಾರ‍್ತವು ದನ್ಯವೆಂದರು
ನಮ್ಮ ಶ್ರೀ ತರಳಬಾಳು ಸದ್ಗುರುವು

 

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *