ಕವಿತೆ: ಹೊಸತನ
ಇದೇನು ಹೊಸತನ ಮನದೊಳಗೆ
ಮೆಲ್ಲನೆ ಕೂಗಿದೆ ಎದೆಯೊಳಗೆ
ಉಸಿರಾಟವ ಮರೆಸಿದೆ ಇದು ಎನಗೆ
ಹಕ್ಕಿಯ ಕಲರವ ಕೇಳುತಿದೆ
ಮನವಿದು ಜಿಗಿದು ಹಾರುತಿದೆ
ಸುತ್ತಣ ಮುದವ ನೀಡುತಿದೆ
ಹಗಲು ಇರುಳು ಲೆಕ್ಕಿಸದೆ
ಸುಮ್ಮನೆ ಕನಸ ಕಾಣುತಿಹೆ
ಆಸೆಯ ಕಡೆಗೆ ಓಡುತಿಹೆ
ಮನವಿದು ಮುದದಿ ನಲಿಯುತಿದೆ
ಆಸೆಯ ಕಡಲನು ಉಕ್ಕಿಸಿದೆ
ಮುಂದೇನೆಂಬುದ ಲೆಕ್ಕಿಸದೆ
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು