ಹುರುಳಿ ಬಸ್ಸಾರು

– ಕಿಶೋರ್ ಕುಮಾರ್.

ಏನೇನು ಬೇಕು

  • ಹುರುಳಿ – 1 ದೊಡ್ಡ ಲೋಟ
  • ಈರುಳ್ಳಿ – 2
  • ಮೆಣಸಿನಕಾಯಿ – 3
  • ತೆಂಗಿನಕಾಯಿತುರಿ – ಸ್ವಲ್ಪ
  • ಕಾರದಪುಡಿ – 2 ಚಮಚ
  • ಹುಣಸೆಹಣ್ಣು – ಸ್ವಲ್ಪ
  • ಚಕ್ಕೆ – ಚಿಕ್ಕ ಚೂರು
  • ಲವಂಗ – 1
  • ಬೆಳ್ಳುಳ್ಳಿ – 4 ಎಸಳು
  • ಕರಿಬೇವು – 10 ಎಲೆ
  • ಸಾಸಿವೆ – ಸ್ವಲ್ಪ
  • ಅಡುಗೆ ಎಣ್ಣೆ – ಸ್ವಲ್ಪ

ಮಾಡುವ ಬಗೆ

ಹುರುಳಿಯನ್ನು ತೊಳೆದು, ಕುಕ್ಕರ್ ಗೆ ಹಾಕಿ, ಸ್ವಲ್ಪ ಉಪ್ಪು ಹಾಕಿ, ನೀರು ಸೇರಿಸಿ 5 ವಿಶಲ್ ಹೊಡೆಸಿ. ಬೆಂದ ಹುರುಳಿಯಿಂದ ನೀರನ್ನು ಬಸಿದು, ಬಸಿದ ನೀರನ್ನು ಒಂದು ಪಾತ್ರೆಯಲ್ಲಿ ತೆಗೆದಿಡಿ. ಒಂದು ಚಿಕ್ಕ ಜಾರ್ ಗೆ ಕಾಯಿ ತುರಿ, ಕಾರದಪುಡಿ, ಚಕ್ಕೆ, ಲವಂಗ, 2 ಬೆಳ್ಳುಳ್ಳಿ ಎಸಳು, ಹುಣಸೆಹಣ್ಣು, ಹೆಚ್ಚಿದ ಒಂದು ಪುಟ್ಟ ಈರುಳ್ಳಿ ಹಾಗೂ ¼ ಲೋಟದಶ್ಟು ಬಸಿದಿಟ್ಟ ಹುರುಳಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಒಂದು ಪಾತ್ರೆಗೆ ಅಡುಗೆ ಎಣ್ಣೆ ಹಾಕಿ ಕಾಯಿಸಿ, ಕಾದ ಎಣ್ಣೆಗೆ ಸಾಸಿವೆ, 2 ಬೆಳ್ಳುಳ್ಳಿ ಎಸಳು, 1 ಕತ್ತರಿಸಿದ ಒಣಮೆಣಸಿನಕಾಯಿ, ಕರಿಬೇವು ಹಾಕಿ ಇದಕ್ಕೆ ರುಬ್ಬಿಟ್ಟುಕೊಂಡಿದ್ದ ಕಾರವನ್ನು ಸೇರಿಸಿ ಒಗ್ಗರಣೆ ಮಾಡಿ. ಇದಕ್ಕೆ ಹುರುಳಿಯಿಂದ ಬಸಿದ ನೀರನ್ನು ಸೇರಿಸಿ, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಬೇಕಾದಶ್ಟು ನೀರು ಸೇರಿಸಿ ಕುದಿಸಿ.

ಒಂದು ಬಾಣಲೆಗೆ ಅಡುಗೆ ಎಣ್ಣೆ ಹಾಕಿ, ಕಾದ ಎಣ್ಣೆಗೆ ಕತ್ತರಿಸಿದ 1 ಈರುಳ್ಳಿ, 2 ಮೆಣಸಿನಕಾಯಿ, ಕರಿಬೇವು, ಉಳಿದ ಬೇಯಿಸಿಟ್ಟಿದ್ದ ಹುರುಳಿ, ತೆಂಗಿನಕಾಯಿ ತುರಿ ಸೇರಿಸಿ ಚೆನ್ನಾಗಿ ಹುರಿಯಿರಿ. ಈಗ ಹುರುಳಿ ಬಸ್ಸಾರು ರೆಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: