ಮೊಟ್ಟೆ ತವಾ ಪ್ರೈ
ಏನೇನು ಬೇಕು
ಮೊಟ್ಟೆ – 6
ಈರುಳ್ಳಿ(ಮದ್ಯಮ ಗಾತ್ರ) – 2
ಹಸಿಮೆಣಸಿನಕಾಯಿ – 4
ಶುಂಟಿ ಬೆಳ್ಳುಳ್ಳಿ ಪೇಸ್ಟ್ – 1ಚಮಚ
ಟೊಮೆಟೊ(ಮದ್ಯಮ ಗಾತ್ರ) – 1
ಅರಿಶಿಣ ಪುಡಿ ½ ಚಮಚ
ಗರಂ ಮಸಾಲ – ½ ಚಮಚ
ಅಚ್ಚ ಕಾರದ ಪುಡಿ -½ ಚಮಚ
ದನಿಯಾ ಪುಡಿ – ½ ಚಮಚ
ಕಾಳು ಮೆಣಸಿನ ಪುಡಿ – ½ ಚಮಚ
ಉಪ್ಪು – ರುಚಿಗೆ ತಕ್ಕಶ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ ಸ್ವಲ್ಪ
ಮಾಡುವ ವಿದಾನ
ಮೊದಲಿಗೆ ಮೊಟ್ಟೆಗಳನ್ನು ನೀರಿನಲ್ಲಿ ಬೇಯಿಸಿ, ಸಿಪ್ಪೆ ಸುಲಿದು ಅರ‍್ದ ಹೋಳು ಮಾಡಿ ಇಡಬೇಕು. ಒಂದು ತವೆಗೆ ಸ್ವಲ್ಪ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿ ಮೊಟ್ಟೆ ಹೋಳುಗಳನ್ನು ಹಾಕಿ ಎರಡು ಬದಿ ಬೇಯಿಸಿ. ಆ ವೇಳೆ ಅಚ್ಚ ಕಾರದ ಪುಡಿ, ಅರಿಶಿನ, ಸ್ವಲ್ಪ ಪುಡಿ ಉಪ್ಪನ್ನು ಎಲ್ಲಾ ಮೊಟ್ಟೆ ಮೇಲೆ ಉದುರಿಸಿ ಬೇಯಿಸಿ ಪಕ್ಕಕ್ಕಿಡಿ.
ಒಂದು ಪ್ಯಾನ್ ಅತವಾ ಬಾಣಲಿಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೆಟೊ ಹಾಕಿ ಚೆನ್ನಾಗಿ ಬಾಡಿಸಿ, ಶುಂಟಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ , ಆನಂತರ ಗರಂ ಮಸಾಲ, ದನಿಯಾ ಪುಡಿ , ಕಾಳು ಮೆಣಸಿನ ಪುಡಿ, ರುಚಿಗೆ ತಕ್ಕಶ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಬಳಿಕ ಪ್ರೈ ಮಾಡಿಟ್ಟಿದ್ದ ಮೊಟ್ಟೆ ಗಳನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಬೆರೆಸಿಡಿ. ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ರುಚಿಯಾದ ಮೊಟ್ಟೆ ತವಾ ಪ್ರೈ ಸಿದ್ದವಾಗುತ್ತದೆ.
ಇತ್ತೀಚಿನ ಅನಿಸಿಕೆಗಳು