ಕವಿತೆ: ನಿರೀಕ್ಶೆ
ನೀಲ ಮೇಗಗಳ ಮದುರ ಮೈತ್ರಿಯಲಿ
ಬುವಿಯ ಸಾಂಗತ್ಯ ಬಯಸಿ ದರೆಗಿಳಿದಂತಿತ್ತು
ವಸುದೆ ಮೊಗಮುಚ್ಚಿಹಳು ಲಜ್ಜೆಯದಲಿ
ಹಬ್ಬದ ವಾತವರಣ ಕಂಗಳ ತುಂಬಿತ್ತು
ಪವಿತ್ರ ಮಿಲನಕೆ ಜಗವು ಸಾಕ್ಶಿಯಾಗುತಲಿ
ದ್ರುಶ್ಟಿ ಕಿಚ್ಚು ತಗಲಿ ಬಿರುಗಾಳಿ ಬೀಸಿತ್ತು
ದಾಂಗುಡಿಗೆ ಬಿಗಿ ಬಂದನ ಸಡಿಲಾಗುತಲಿ
ವಿರಹ ಗೀತೆಯಿಂದ ರೋದಿಸುತಿತ್ತು
ವಸುದೆಗೆ ಗ್ರಹಣ ಹಿಡಿಯುತಲಿ
ನೀಲ ಮೇಗಕೆ ರಾಹು ನುಂಗಿತ್ತು
ಅಗಲುವಿಕೆಗೆ ಪ್ರಕ್ರುತಿ ರೋದಿಸುತಲಿ
ನೇಸರನ ಆಗಮನಕೆ ಮನಕಾಯುತಿತ್ತು
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು