ಕವಿತೆ: ಕಲಿಮನೆ
ಬಳಪದಿ ಬರೆದು
ಕಯ್ಯಲಿ ಒರೆಸಿದ ಆ ಸ್ಲೇಟು
ಮೊಂಡಾದ ಒಡನೆ ಒರೆಯಲು
ಚೂಪಾಗಿ ಬರುತ್ತಿದ್ದ ಆ ಪೆನ್ಸಿಲ್
ಮೊದಲ ದಿನವೇ ಅಳುತಾ ಶಾಲೆಗೆ ಸೇರಿ
ನಗುತಾ ಮನೆಗೆ ಮರಳಿದೆವು
ಬಿದ್ದರೂ ಅಳದೆ
ಗಾಯವ ಮರೆಸಿ, ಮನೆಯ ಹೊಕ್ಕೆವು
ಊಟದ ಸಮಯಕೆ ಒಟ್ಟಿಗೆ ಸೇರಿ
ಡಬ್ಬಿಯ ಊಟ ಸವಿದೆವು
ಆಟದ ಸಮಯಕೆ ಕಾಯುತ ಕುಳಿತು
ಸ್ವರ್‍ಗವೇ ಸಿಕ್ಕಂತೆ ಕುಣಿದೆವು
ಗಲಾಟೆ ಮಾಡಿದ ತಪ್ಪಿಗೆ ಸಿಕ್ಕಿ
ಒಂಟಿ ಕಾಲಲಿ ನಿಂತೆವು
ವಿದ್ಯೆಯ ಜೊತೆಗೆ ಬುದ್ಧಿಯ ಕಲಿತು
ವಿದ್ಯಾರ್‍ತಿಗಳಾಗಿ ಗೆದ್ದೆವು.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು