ತಟ್ಟಂತೆ ಮಾಡಿ ಚಿಕನ್ ಡ್ರೈ
ಏನೇನು ಬೇಕು
- ಕತ್ತರಿಸಿದ ಕೋಳಿ – ½ ಕಿಲೋ (ಚರ್ಮ ತೆಗೆದದ್ದು)
- ದಪ್ಪ ಈರುಳ್ಳಿ – 1
- ಅರಿಶಿಣದಪುಡಿ – ಸ್ವಲ್ಪ
- ಒಣ ಮೆಣಸಿನಕಾಯಿ ಪುಡಿ – ಸ್ವಲ್ಪ
ಮಾಡುವ ಬಗೆ
ಕತ್ತರಿಸಿದ ಕೋಳಿಯನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ತೊಳೆದು, ನೀರನ್ನು ಸೋಸಿ ಇಡಿ. ಒಂದು ಬಾಣಲೆಗೆ ಸ್ವಲ್ಪ ಅಡುಗೆ ಎಣ್ಣೆ ಹಾಕಿ, ಕಾದ ಎಣ್ಣೆಗೆ ಸಣ್ಣದಾಗಿ ಕತ್ತರಿಸಿದ ಈರುಳ್ಳಿಯನ್ನು ಹಾಕಿ, ಹುರಿಯಿರಿ.
ಈಗ ತೊಳೆದಿಟ್ಟಿದ್ದ ಕೋಳಿ ತುಂಡುಗಳನ್ನು ಸೇರಿಸಿ ಇದಕ್ಕೆ ಸ್ವಲ್ಪ ಅರಿಶಿಣದ ಪುಡಿಯನ್ನು ಹಾಕಿ ಹುರಿಯಿರಿ. ನಂತರ ರುಚಿಗೆ ತಕ್ಕಶ್ಟು ಒಣಮೆಣಸಿನಕಾಯಿ ಪುಡಿ ಹಾಕಿ, ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ ಬಾಡು ಬೇಯುವವರೆಗೂ ಹುರಿಯಿರಿ (ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ ಬೇಯಿಸಿ). ಈಗ ರುಚಿಯಾದ ಚಿಕನ್ ಡ್ರೈ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು