ಕಿರುಗವಿತೆ: ಕಾರಿರುಳ ಮುಸುಕು
– ನಿತಿನ್ ಗೌಡ.
ಕಾರಿರುಳ ಮುಸುಕು
ಕಾರಿರುಳ ಮುಸುಕನು ಸರಿಸುತ,
ಬೆಳಗುವನು ಕಡಲ್ಮೊಗವ ಚಂದಿರ,
ಬೀರುತ ನಗುವನು;
ಆಗ ತನ್ನ ಹಾಲ್ಗೆನ್ನೆಯ ಅಂಚಲಿ,
ಏರುವುದು ಮುಗಿಲೆತ್ತರ ಕಡಲಲೆಯ ಸಾಲು
ಇದ ನೋಡಲು.
ಎತ್ತ ತಿರುಗಿದತ್ತ ತೋರದು ತೀರ,
ಇದರೊಳು ಅಂಜಿಕೆಯೇ ಮರಣಕೆ ಮುನ್ನುಡಿ,
ದೈರ‌್ಯವೇ ಬದುಕೆಡೆಗೆ ದಿಕ್ಸೂಚಿ;
ಈ ನಡುವೆ ಸಾಗುತಿಹುದು ಕಡಲ ಪಯಣವು,
ಅಂಬಿಗನ ನಂಬಿಕೆಯ ಹುಟ್ಟಿನಿಂದ,
ಕಡಲೆದೆಯ ಸೀಳುತ, ಬದುಕೆಂಬ ದಡ ಸೇರಲು;
( ಚಿತ್ರಸೆಲೆ: microsoft.com )
ಇತ್ತೀಚಿನ ಅನಿಸಿಕೆಗಳು