ಕವಿತೆ: ರವಿರಾಣಿ
ಪಳ ಪಳ ಹೊಳೆಯುತ ಜಗಮಗ ಜಳಕಿಸೆ
ಬೆಳಕಿನ ಕೊಡವಿಡಿದಳ್ ರವಿರಾಣಿ
ಮೋಡದ ಮಕ್ಕಳ ಸುತ್ತುತ ಪೀಡಿಸೆ
ಅತ್ತಿಂದಿತ್ತಗೆ ನೀರಾಡಿ
ಗಾಳಿಯರಾಯರು ಮಕ್ಕಳ ಸರಿಸಲು
ಸುವಿಸುರ್ ಗುಟ್ಟುತ ಹಾರಾಡಿ
ಮೋಡವವ್ ಕೇಳ್ವವೆ, ಅವ್ವನ ತಬ್ಬಲು
ಕರಿಕಂಡಿತು ಪೈರ್ ತಲೆಬಾಗಿ
ಆ ಪೈರಡಿಯಲಿ ಗೊದ್ದವು ಹರಿಯುತೆ
ಬಾಯಲಿ ಹಿಡಿಯಿತು ಕಾಳೊಂದ
ನೊಣ್ ನೊಣ್ ಗುಟ್ಟುತ ನೊಣಗುವ
ನೊಣವದು ಅರಸುವುದಾದರು ಏನಂತ
ಬಾನಿನ ಚುಕ್ಕಿ ಮಿನುಗನು ಮರೆಯಿಸಿ
ಮತ್ತೋಡ್ ಬಂದಳು ರವಿಯಮ್ಮ
ನೆಲದ ಹಕ್ಕಿ ಬಾನಿಗೆ ಹಾರಿ
ಗಾಳಿಯೊಡೆಯನನು ತಬ್ಬಮ್ಮ
ಬೆಟ್ಟವು ಬೆಳಗಲಿ, ಜಳಕವು ಸಾಗಲಿ
ಜಗದಾ ಜಡವನು ಜಾರಿಸಲಿ
ಮೂಡಣ ದಿಕ್ಕಿಗೆ, ಮೋಡದ ರೆಕ್ಕೆಗೆ
ಹಸುರಿನ ಕೈಗಳ ಜೋಡಿಸಲಿ
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು