ಮಾರ್‍ಚ್ 27, 2025

ಕಿರುಗವಿತೆ: ಜಗದೊಡಲ ಸೊಗಸು

– ನಿತಿನ್ ಗೌಡ. ಸುಂದರವಾಗಿದೆ ಹೂದೋಟದ ಸೊಗಸು, ಮನಸೂರೆಯಾಗದೇನು? ಈ ನೋಟದಂದವು! ಆದರೂ, ಕೀಳಲೊಲ್ಲವೆನುತಿದೆ ಇದರೊಳ ಹೂಗಳನು, ಮನಸು.. ನಿರ್‍ಮಲವಾಗಿದೆ ಹರಿಯುವ ನೀರು; ಸುತ್ತಣದ ಆಗಸಕೆ ಹಿಡಿದ ಕನ್ನಡಿಯಂತೆ, ತಡೆಯಲೊಲ್ಲವೆನುತಿದೆ ಇದರ ಹರಿವನು ಮನಸು.....