ಕವಿತೆ: ಉಗಾದಿ
ಯುಗದ ಆದಿ ಯುಗಾದಿ
ಮತ್ತೆ ಮರಳಿ ಬಂದಿದೆ
ವರುಶ ವರುಶವೂ ಹರುಶದಿಂದ
ಹೊಸತನವ ಹೊತ್ತು ತರುತಿದೆ
ಮತ್ತೆ ಚಿಗುರಿದೆ ಚೈತ್ರದ ಚೆಲುವು
ಇಳೆಯ ತುಂಬಾ ಹಸಿರು ತೋರಣ
ಎಲ್ಲೆಲ್ಲೂ ಇಂಪಾಗಿ ಕೇಳಿ ಬರುತಿದೆ
ಮಾಮರದ ರಸವುಂಡ ಹಕ್ಕಿ ಗಾಯನ
ವಸಂತ ಕಾಲದ ಈ ಸಡಗರಕೆ
ಸಜ್ಜಾಗಿದೆ ಪ್ರಕ್ರುತಿಯ ಮಡಿಲು
ಹಳೆ ಕಹಿಯು ಕಳೆದು ಹೊಸ ಕಳೆಯು
ಮೂಡಲೆಂದು ಬಯಸಿದೆ ಬುವಿಯ ಒಡಲು
ಎಲ್ಲಾ ಹೊಸತು ಏನೋ ಸಿರಿಯು
ಉಕ್ಕಿದಂತಿದೆ ಈ ದರೆಗೆ
ಬೇವು ಬೆಲ್ಲದ ಕಹಿ ಸಿಹಿಯ ಸವಿಯು
ಸಮರಸವ ಸಾರಿದಂತಿದೆ ಈ ಬದುಕಿಗೆ
(ಚಿತ್ರ ಸೆಲೆ: mangalorean.com)
ಇತ್ತೀಚಿನ ಅನಿಸಿಕೆಗಳು