ಮೊಟ್ಟೆ ಪಾವ್ ಬಾಜಿ
ಏನೇನು ಬೇಕು
- ಬೆಣ್ಣೆ – 2 ಚಮಚ
- ಈರುಳ್ಳಿ – 2
- ಹಸಿ ಮೆಣಸಿನಕಾಯಿ – 3
- ಟೊಮೆಟೊ – 1
- ಉಪ್ಪು – 1 ಚಮಚ
- ಒಣ ಮೆಣಸಿನಕಾಯಿ ಪುಡಿ – 1 ಚಮಚ
- ಅರಿಶಿಣದ ಪುಡಿ – ½ ಚಮಚ
- ಪಾವ್ ಬಾಜಿ ಮಸಾಲೆ – 1.5 ಚಮಚ
- ನೀರು – ¼ ಲೋಟ
- ಬೇಯಿಸಿದ ಮೊಟ್ಟೆ – 3
- ಆಮ್ಲೆಟ್ (ಹಾಪ್ ಬಾಯಿಲ್ಡ್) – 1 (ಬೇಕಿದ್ದರೆ)
- ಕೊತ್ತಂಬರಿ ಸೊಪ್ಪು (ಅಲಂಕಾರಕ್ಕಾಗಿ)
ಮಾಡುವ ಬಗೆ
ಒಂದು ಪ್ಯಾನ್ ಗೆ 2 ಚಮಚ ಬೆಣ್ಣೆ ಹಾಕಿ ಕಾಯಿಸಿ, ನಂತರ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೆಟೊ ಹಾಕಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಒಣಮೆಣಸಿನಕಾಯಿ ಪುಡಿ, ಉಪ್ಪು, ಅರಿಶಿಣದ ಪುಡಿ ಹಾಗೂ ಪಾವ್ ಬಾಜಿ ಮಸಾಲೆ ಹಾಕಿ 1 ನಿಮಿಶ ಹುರಿಯಿರಿ.
ಕಾಲು ಲೋಟ ನೀರು ಸೇರಿಸಿ ನಂತರ ಮ್ಯಾಶರ್ (masher) ನಿಂದ ಪ್ಯಾನ್ ನಲ್ಲಿರುವ ತರಕಾರಿಗಳನ್ನೆಲ್ಲ ಒತ್ತಿ, ನುಣ್ಣಗೆ ಮಾಡಿ. ಬೇಯಿಸಿದ ಮೊಟ್ಟೆಗಳನ್ನು ಸಣ್ಣದಾಗಿ ಕತ್ತರಿಸಿ ಇದಕ್ಕೆ ಸೇರಿಸಿ 1 ನಿಮಿಶ ಹುರಿಯಿರಿ. ಇದಕ್ಕೆ ಕತ್ತಸಿ ಕೊತ್ತಂಬರಿಸೊಪ್ಪು ಉದುರಿಸಿ ಅದರ ಮೇಲೆ ಹಾಪ್ ಬಾಯಿಲ್ಡ್ ಆಮ್ಲೇಟ್ ಹಾಕಿ ಪಾವ್ (ಬ್ರೆಡ್) ಜೊತೆ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು