ಕಿರುಗವಿತೆಗಳು

– ನಿತಿನ್ ಗೌಡ

ಅನುರಾಗವೆಂಬ ಕೀಲಿ

ಸುತ್ತುವೆ ನಾ ಎಡೆಬಿಡದೆ ನಿನ್ನೊಲೊವ ಅರಸಿ
ಗಡಿಯಾರದ ಮುಳ್ಳಿನಂತೆ;
ತಡವಾದರೂ ನೀ ಮರೆಯಬೇಡ;
ನಿನ್ನ ಅನುರಾಗವೆಂಬ ಕೀಲಿ ಕೊಡುವುದನು;
ನಡೆಯುವುದಾಗ ನಮಿಬ್ಬರ ಒಲವ ಪಯಣ;
ಒಮ್ಮೊಮ್ಮೆ ಸರಸ, ಇನ್ನೊಮ್ಮೆ ಮುನಿಸು,
ಒಮ್ಮೊಮ್ಮೆ ನೋವು, ಇನ್ನೊಮ್ಮೆ ನಲಿವುಗಳೆಂಬ
ಗಳಿಗೆಗಳು ಬೇಟಿ ಆಗುವವು, ಆಗಾಗ;
ಗಡಿಯಾರದ ಮುಳ್ಳುಗಳಂತೆ,
ಈ ಕೊನೆ ಬಯಸದ ಬಾಳಪಯಣದಲಿ..

ಮುಗಿಲ ಮುಡಿ

ಹೇಳಿ ಬಿಡು, ನಿನ್ನೊಲವ ಬಾವನೆಗಳ ಸಾರಾಂಶ;
ಸಿಗಲಾರದೇನೋ ಈ ಗಳಿಗೆ ಇನ್ನೊಮ್ಮೆ?
ಸಿಗುವ ಉತ್ತರದಿ, ತಿಳಿಯಾಗುವುದು ನಿನ್ನ ದಾರಿ!
ಗೊಂದಲವೆಂಬ ಮಂಜು ಸರಿದು, ಕೊನೆಗೆ;
ಮುಗಿಲ ಮುಡಿಯಿಂದ ದರೆಗಿಳಿದು
ಹಗುರಾದ ಮಳೆಯಂತೆ,
ತಿಳಿಯಾಗುವುದು ನಿನ್ನ ಮನಸು.

( ಚಿತ್ರಸೆಲೆ: Image generated using ChatGPT with DALL·E by OpenAI. )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *